ವಿಜಯವಾಣಿ ಸುದ್ದಿಜಾಲ ಗದಗ
ನಗರದ ತೋಂಟದಾರ್ಯ ಮಠದಲ್ಲಿ ಅ.25 ರಂದು ಬೆಳಗ್ಗೆ ತೋಂಟದ ಸಿದ್ಧಲಿಂಗ ಶ್ರೀಗಳ 5ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗುವುದು ಎಂದು ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ಭಾನುವಾರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠೀ ನಡೆಸಿ ಮಾತನಾಡಿದ ಅವರು,ಸಮಾರಂಭದಲ್ಲಿ ಮರಣವೇ ಮಹಾನವಮಿ ಆಚರಣೆ, ನಿವೃತ್ತ ಐಎಎಸ್ ಅಧಿಕಾರಿ ಡಾ. ಎಸ್. ಎಂ ಜಾಮದಾರ ಅವರಿಗೆ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಗ್ರಂಥಗಳ ಬಿಡುಗಡೆ ಮತ್ತು ಶಾಲಾ ಕೊಠಡಿಗೆ ಶಂಕುಸ್ಥಾಪನೆ ಜರುಗುವುದು. ತೋಂಟದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ನಾಡಿನ ಹಲವು ಗಣ್ಯರು ಮತ್ತು ಮಠಾಧೀಶರು ಹಲವರು ಉಪಸ್ಥಿತಿ ಇರುವರು ಎಂದು ತಿಳಿಸಿದರು.
ತೋಂಟದ ಶ್ರೀಗಳ ಕುರಿತಾದ ಕರುಣಾಮಯಿ, ಮಾತೃಹೃದಯಿ ಹಾಗೂ ವಚನ ಸಾಹಿತ್ಯ ಅಧ್ಯಯನಗಳ ಸಮೀೆ, ಲಿಂಗಾಯತ ಧರ್ಮದ ತತ್ವ ಸಿದ್ಧಾಂತ, ಕನ್ನಡ ಸಾಹಿತ್ಯದಲ್ಲಿ ಸತ್ಯೇಂದ್ರ ಚೋಳ ಎಂಬ ಗ್ರಂಥಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳುವವು. ಪಿ.ಬಿ ರಸ್ತೆಗೆ ಹೊಂದಿಕೊಂಡಿರುವ ಸಂಸ್ಥೆಯ ನಿವೇಶನದನಲ್ಲಿ ತೋಂಟದಾರ್ಯ ಪ್ರೌಢಶಾಲೆಯ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರುವುದು ಎಂದು ತಿಳಿಸಿದರು.
ಶೇಖಣ್ಣ ಕಳಸಾಪೂರ, ಬಾಲಚಂದ್ರ ಭರಮಗೌಡರ, ಅಮರೇಶ ಅಂಗಡಿ, ಕೊಟ್ರೇಶ ಮೆಣಸಿನಕಾಯಿ, ವಿವೇಕಾನಂದಗೌಡ ಪಾಟೀಲ, ಮಂಜುನಾಥ ಕೊಟ್ನೆಕಲ್, ಸಂತೋಷ ಕಬಾಡರ, ಅಶೋಕ ಹಾದಿ, ಉಮೇಶ ನಾಲವಾಡದ ಇತರರು ಇದ್ದರು.