ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಜ್ಯೋತಿರ್ನಮನ ಸಮಾರಂಭದಲ್ಲಿ 25 ಸಾವಿರ ದೀಪಗಳನ್ನು ಬೆಳಗಿಸಲಾಯಿತು.  
ಜಿಲ್ಲೆ

ಅಥರ್ಗಾ ಗ್ರಾಮದಲ್ಲಿ ಜ್ಯೋತಿರ್ನಮನ

ಇಂಡಿ: ಜೀವನ ಸಾರ್ಥಕತೆಗೆ ಸದಾ ಧರ್ಮ ಮಾರ್ಗದಲ್ಲಿ ಬದುಕಬೇಕೆಂದು ಸಿದ್ಧೇಶ್ವರ ಶ್ರೀಗಳು ಹೇಳಿದ್ದನ್ನು ನಾವೆಲ್ಲರೂ ಪಾಲಿಸುವುದು ಅವಶ್ಯವಾಗಿದೆ ಎಂದು ಗುರುದೇವಾಶ್ರಮದ ಈಶ ಪ್ರಸಾದ ಶ್ರೀಗಳು ಹೇಳಿದರು.

ಸಿದ್ಧೇಶ್ವರ ಶ್ರೀಗಳ ಜನ್ಮದಿನದ ನಿಮಿತ್ತ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 25 ಸಾವಿರ ಜ್ಯೋತಿರ್ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧರ್ಮದಿಂದ ಸುಖ, ಅಧರ್ಮದಿಂದ ದುಃಖ ಇರುತ್ತದೆ. ಇದರಿಂದ ಹೊರಬರಲು ಧಾರ್ಮಿಕ ಆಚರಣೆ ಅವಶ್ಯ ಎಂದರು.

ಕೊಲ್ಲಾಪುರ ಕನ್ನೇರಿಮಠದ ಷಡಕ್ಷರಿ ಮಹಾಸ್ವಾಮಿಗಳು ಮಾತನಾಡಿ, ಜೀವನದಲ್ಲಿ ಕಷ್ಟಗಳು ಬಂದಾಗ ಇದು ಭಗವಂತನ ಪರೀಕ್ಷೆ ಎಂದು ಮುಂದೆ ಸಾಗಬೇಕು. ಮುಂದೊಂದು ದಿನ ಒಳ್ಳೆಯ ದಿನಗಳು ಬರುತ್ತವೆ ಎಂದರು.

ಚಿಂಚಲಿಯ ಗುರುದೇವಾಶ್ರಮ ಮಠದ ಸಿದ್ದ ಪ್ರಸಾದ ಶ್ರೀಗಳು, ಸಿದ್ಧೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಜು ಸಜ್ಜನ, ವಿಠ್ಠಲಗೌಡ ಪಾಟೀಲ, ಶಿಕ್ಷಕ ಸಿ.ಎಸ್.ಮೇತ್ರಿ ಮಾತನಾಡಿದರು.

ಗ್ರಾಮದ ಕುಲಂಕುರಾರೇಶ್ವರ ವೃತ್ತದಿಂದ ಗುರುದೇವ ಆಶ್ರಮದವರೆಗೆ ಸಿದ್ಧೇಶ್ವರ ಶ್ರೀಗಳ ಭಾವಚಿತ್ರದ ಮೆರವಣೆಗೆ ನಡೆಯಿತು.

25 ಸಾವಿರ ಜ್ಯೋತಿರ್ನಮನ ಕಾರ್ಯಕ್ರಮ ಮಹಿಳೆಯರಿಂದ ನಡೆಯಿತು. ಗ್ರಾಮದ ಯುವ ಬಳಗ, ಸೇವಾಲಾಲ ತಂಡವರು ಪಾಲ್ಗೊಂಡಿದ್ದರು.