ವಿಜಯಪುರ: ನಗರದ ಆರಾಧ್ಯದೈವ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿರುವ ಶಿವಾನುಭವ ಮಂಟಪದಲ್ಲಿ ನೂತನವಾಗಿ ಆರಂಭಿಸಿದ ಶ್ರೀ ಸಿದ್ಧೇಶ್ವರ ಅನ್ನ ದಾಸೋಹ ಸೇವೆಗೆ ಸಂಸ್ಥೆ ಅಧ್ಯ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಇನ್ನು ಮುಂದೆ ದೇವಸ್ಥಾನಕ್ಕೆ ಪರ ಸ್ಥಳದಿಂದ ಆಗಮಿಸುವ ಭಕ್ತರಿಗೆ, ಪ್ರವಾಸಿಗರಿಗೆ ಹಾಗೂ ರುದ್ರಾಭಿಷೇಕ ಮಾಡಿಸುವ ಭಕ್ತರಿಗೆ ನಿತ್ಯ ದಾಸೋಹ ಸೇವೆ ನಡೆಯಲಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಕುಟುಂಬದಿಂದ ಪ್ರಾರಂಭೋತ್ಸವ ದಿನದ ದಾಸೋಹ ಸೇವೆ ನೆರವೇರಿಸಲಾಯಿತು.
ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ, ನಿರ್ದೇಶಕರಾದ ಬಸವರಾಜ ಸೂಗೂರ, ಸದಾಶಿವ ಗುಡ್ಡೋಡಗಿ, ಎನ್.ಎಂ. ಗೊಲಾಯಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಮಲಕಪ್ಪ ಗಾಣಿಗೇರ, ಸಾಯಿಬಣ್ಣ ಭೋವಿ, ವಿಜಯಕುಮಾರ ಡೋಣಿ, ಎಸ್.ಎಸ್. ನಾಡಗೌಡ, ಸುಧೀರ ಚಿಂಚಲಿ, ಮುಖಂಡರಾದ ಸಿದ್ರಾಮಪ್ಪ ಉಪ್ಪಿನ ಮತ್ತಿತರರಿದ್ದರು.
ವಿಜಯಪುರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ಆರಂಭಿಸಿದ ಶ್ರೀ ಸಿದ್ಧೇಶ್ವರ ಅನ್ನ ದಾಸೋಹದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಸಾದ ಸ್ವೀಕರಿಸಿದರು. ಬಸಯ್ಯ ಹಿರೇಮಠ, ಸಿದ್ರಾಮಪ್ಪ ಉಪ್ಪಿನ, ಬಸವರಾಜ ಸುಗೂರ ಮತ್ತಿತರರಿದ್ದಾರೆ.