ಮುದ್ದೇಬಿಹಾಳ ಪಟ್ಟಣದ ಕಾರ್ಗಿಲ್ ವೀರಯೋಧರ ಸ್ಮಾರಕದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಭಾವಚಿತ್ರಕ್ಕೆ ಮೊಂಬತ್ತಿ ಬೆಳಗಿ ನಮನ ಸಲ್ಲಿಸಲಾಯಿತು. ಎಸ್.ಎ.ಬೇವಿನಗಿಡದ, ಬಾಪೂಗೌಡ ಪಾಟೀಲ, ವೆಂಕನಗೌಡ ಪಾಟೀಲ, ಬಿ.ಎಸ್.ಪಾಟೀಲ, ಬಸಯ್ಯ ನಂದಿಕೇಶ್ವರಮಠ, ಮಹಾಂತೇಶ ಬೂದಿಹಾಳಮಠ, ಮಹ್ಮದರಫೀಕ ಶಿರೋಳ ಇತರರಿದ್ದರು.  
ಜಿಲ್ಲೆ

ಸಿದ್ಧೇಶ್ವರ ಸ್ವಾಮೀಜಿ ಸತ್ಯದ ಮಾರ್ಗ ತೋರಿದ ಸಂತ

ಮುದ್ದೇಬಿಹಾಳ: ಸಮಾಜಕ್ಕೆ ಸರಳತೆ, ಸತ್ಯದ ಮಾರ್ಗ ತೋರಿದ ಸಿದ್ಧೇಶ್ವರ ಸ್ವಾಮೀಜಿ ಚಿರಸ್ಮರಣೀಯರಾಗಿದ್ದಾರೆ ಎಂದು ನಿವೃತ್ತ ಶಿಕ್ಷಕ ಎಸ್.ಎ.ಬೇವಿನಗಿಡದ ಹೇಳಿದರು.

ಇಲ್ಲಿನ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ವೀರಯೋಧರ ಸ್ಮಾರಕದಲ್ಲಿ ಸ್ಮಾರಕ ಸಮಿತಿ ಗುರುವಾರ ಏರ್ಪಡಿಸಿದ್ದ ಸಿದ್ಧೇಶ್ವರ ಶ್ರೀಗಳ ಎರಡನೇ ಪುಣ್ಯಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.

ಸಿದ್ಧೇಶ್ವರ ಸ್ವಾಮೀಜಿ ಅವರೊಂದಿಗೆ ಆಸ್ಟ್ರೇಲಿಯಾದ ಸಮುದ್ರ ದಂಡೆಯಲ್ಲಿ ಕಳೆದ ಅವಿಸ್ಮರಣೀಯ ದಿನಗಳನ್ನು ಸ್ಮರಿಸಿ ಮಾತನಾಡಿದ ದಿ ಕರ್ನಾಟಕ ಕೋ ಆಪ್ ಬ್ಯಾಂಕ್‌ನ ನಿಕಟಪೂರ್ವ ನಿರ್ದೇಶಕ ವೆಂಕನಗೌಡ ಪಾಟೀಲ ಅವರು, ನುಡಿದಂತೆ ನಡೆದವರು, ನಡೆದಂತೆ ನುಡಿದವರಾಗಿದ್ದರು. ಅವರ ಪ್ರವಚನ ಆಲಿಸುವ ಜನರು ಪ್ರವಚನಗಳಲ್ಲಿನ ಸಂದೇಶ ಪಾಲಿಸುತ್ತಿಲ್ಲವಲ್ಲ ಎನ್ನುವ ಕೊರಗು ಅವರಲ್ಲಿತ್ತು ಎಂದರು.

ಎಸ್.ಎಸ್.ಪಾಟೀಲ, ಡಿ.ಬಿ.ವಡವಡಗಿ, ಬಿ.ಎಸ್.ಪಾಟೀಲ ಸರೂರ, ಯುವ ಕಾಂಗ್ರೆಸ್ ಅಧ್ಯಕ್ಷ ಮಹ್ಮದರಫೀಕ ಶಿರೋಳ ಮತ್ತಿತರರು ನುಡಿನಮನ ಸಲ್ಲಿಸಿದರು.

ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಸಯ್ಯ ನಂದಿಕೇಶ್ವರಮಠ, ಸಮಿತಿ ಗೌರವಾಧ್ಯಕ್ಷ ಮಹಾಂತೇಶ ಬೂದಿಹಾಳಮಠ, ಸಮಿತಿ ಉಪಾಧ್ಯಕ್ಷ ಶ್ರೀಕಾಂತ ಹಿರೇಮಠ, ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಹಿರಿಯರಾದ ಬಾಪೂಗೌಡ ಪಾಟೀಲ ಆಲೂರ, ಜಗದೀಶ ಲಕ್ಷಟ್ಟಿ, ಪುನೀತ್ ಹಿಪ್ಪರಗಿ, ಕಾಶಿನಾಥ ಹುಗ್ಗಿ, ಅಶೋಕ ಚಿನಿವಾರ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಎಲ್ಲರೂ ಮೊಂಬತ್ತಿ ಬೆಳಗಿ ನಮನ ಸಲ್ಲಿಸಿದರು.