ಜಿಲ್ಲೆ

ಸಿದ್ಧಾರೂಢ ಫೌಂಡೇಷನ್ ಉದ್ಘಾಟನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ಮೂರುಸಾವಿರ ಮಠದ ಡಾ. ಮೂಜಗಂ ಸಭಾ ಭವನದಲ್ಲಿ ಸಿದ್ಧಾರೂಢ ಫೌಂಡೇಷನ್ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು. ವೃದ್ಧಾಶ್ರಮ ಮತ್ತು ಅನಾಶ್ರಮಗಳಿಗೆ ಕಿಟ್ ವಿತರಿಸಲಾಯಿತು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಶರಣಕಪ್ಪ ಕೊಟಗಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಸಿದ್ಧಾರೂಢ ಫೌಂಡೇಷನ್ ಅಧ್ಯಕ್ಷೆ ಗೀತಾ ಹೊಸಮನಿ, ದೇವಕಿ ಯೋಗಾನಂದ, ರೇಖಾ ಕಲ್ಲಯ್ಯನಮಠ, ಮಲ್ಲಿಕಾರ್ಜುನ ಸಾವಕಾರ, ವೆಂಕಟೇಶ ಕಾಟವೆ, ರಾಜಕುಮಾರ ಸಾಕೋಜಿ, ಮೋಹನ ಹೊಸಮನಿ, ವೆಂಕನಗೌಡ ಪಾಟೀಲ, ನರಸಿಂಹ ಶೆಟ್ಟಿ, ಡಾ. ಅನಿಲಕುಮಾರ ಜರಳಿ, ನಾಗೇಶ ಸಾಲಿ, ಜಾನಕಿ ತೊರವಿ, ಅಮಿತ ಚವ್ಹಾಣ, ಉಮಾ ಸುತಗಟ್ಟಿ, ವೀಣಾ ನಾವಳ್ಳಿ, ದತ್ತುಸಾ ಕಲಬುರ್ಗಿ, ಮಂಜುಳಾ ಮಜುತಿ ಇತರರು ಇದ್ದರು. ವಿದ್ಯಾ ದೇವಗಿರಿ ಪ್ರಾರ್ಥಿಸಿದರು.