ಹುಬ್ಬಳ್ಳಿ: ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ಧಾರೂಢರ 190ನೇ ಹಾಗೂ ಜಗದ್ಗುರು ಶ್ರೀ ಗುರುನಾಥಾರೂಢರ 115 ನೇ ಜಯಂತ್ಯುತ್ಸವ, ಶ್ರೀ ಸಿದ್ಧಾರೂಢರ ಕಥಾಮೃತದ ಶತಮಾನೋತ್ಸವ ನಿಮಿತ್ತ ನಗರದಲ್ಲಿ ಆರೂಢ ಜ್ಯೋತಿ ಯಾತ್ರೆಗೆ ಭಾನುವಾರ ಪೂರ್ವಭಾವಿಯಾಗಿ ಚಾಲನೆ ನೀಡಲಾಯಿತು.
ಶ್ರೀಮಠದ ಟ್ರಸ್ಟ್ ಕಮಿಟಿ ಚೇರ್ಮನ್ ಬಸವರಾಜ ಕಲ್ಯಾಣಶೆಟ್ಟರ್, ವೈಸ್ ಚೇರ್ಮನ್ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ಡಾ. ಗೋವಿಂದ ಮಣ್ಣೂರ, ಶಾಮಾನಂದ ಪೂಜೇರಿ, ಬಾಳು ಮಗಜಿಕೊಂಡಿ, ಚನ್ನವೀರ ಮುಂಗುರವಾಡಿ, ಉದಯಕುಮಾರ ನಾಯ್ಕ, ಅಂದಾನಪ್ಪ ಚಾಕಲಬ್ಬಿ, ವಸಂತ ಸಾಲಗಟ್ಟಿ, ರಮೇಶ ಬೆಳಗಾವಿ, ವಿನಾಯಕ ಘೋಡ್ಕೆ, ವ್ಯವಸ್ಥಾಪಕ ಈರಣ್ಣ ತುಪ್ಪದ ಇತರರು ಇದ್ದರು.
ಈ ಜ್ಯೋತಿ ಯಾತ್ರೆಯು ಡಿ. 23ರಂದು ಶ್ರೀೀ ಸಿದ್ಧಾರೂಢರ ಜನ್ಮ ಸ್ಥಳವಾದ ಬೀದರ ಜಿಲ್ಲೆಯ ಚಳಕಾಪೂರದಿಂದ ಹೊರಟು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ವಿವಿಧ ಮಠ ಹಾಗೂ ವಿವಿಧ ಸ್ಥಳಗಳಲ್ಲಿ ಸಂಚರಿಸಲಿದೆ. 2025ರ ಫೆ. 19 ರಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ತಲುಪಲಿದೆ.