ಜಿಲ್ಲೆ

ಸಿದ್ಧಾರ್ಥ ಹಾರ್ಟ್ ಸೆಂಟರ್ ಲೋಕಾರ್ಪಣೆ ; ಸೇವೆ ಸಮಾಜಮುಖಿಯಾಗಿರಲಿದೆ ಎಂದ ಮಾಜಿ ಡಿಸಿಎಂ ಡಾ.ಪರಮೇಶ್ವರ್

ತುಮಕೂರು: ಅತ್ಯಾಧುನಿಕ ಉಪಕರಣ ಮತ್ತು ನುರಿತ ವೈದ್ಯರನ್ನೊಳಗೊಂಡ ಹೃದಯ ತಪಾಸಣೆ ಮತ್ತು ಚಿಕಿತ್ಸಾ ಕೇಂದ್ರ ‘ಸಿದ್ಧಾರ್ಥ ಅಡ್ವಾನ್ಸ್ ್ಡಹಾರ್ಟ್ ಸೆಂಟರ್’, ನಗರದ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೋಮವಾರದಿಂದ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಂಡಿತು.

ಅತ್ಯಾಧುನಿಕ ಸೌಲಭ್ಯವುಳ್ಳ ಕೇಂದ್ರಕ್ಕೆ ನವದೆಹಲಿಯ ಏಮ್ಸ್ ಸಿ.ಟಿ.ಕೇಂದ್ರದ ಪ್ರಾಧ್ಯಾಪಕ ಡಾ.ದೇವಗೌರೌ ವೇಲಾಯುಧನ್ ಉದ್ಘಾಟಿಸಿ ಮಾತನಾಡಿದರು.

ವಿದೇಶಿ ಗುಣಮಟ್ಟದ ಆಧುನಿಕ ಸಲಕರಣೆಗಳನ್ನು ಒಳಗೊಂಡ ನುರಿತ ವೈದ್ಯರ ತಂಡ ನೂತನ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದೆ. ‘ಹೃದಯದಿಂದ ಹೃದಯಕ್ಕೆ’ಎನ್ನುವ ಪರಿಕಲ್ಪನೆಯ ಅನ್ವಯ ಆಸ್ಪತ್ರೆಯಲ್ಲಿ ಸವಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ನೀಡಲು ವೈದ್ಯತಂಡ ಕಾರ್ಯನಿರ್ವಹಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಹೃದಯ ರೋಗತಪಾಸಣೆ ಮತ್ತು ಎಲ್ಲ ರೀತಿಯ ಚಿಕಿತ್ಸೆ ನೀಡಲು ಹೃದಯಕೇಂದ್ರ ಆರಂಭಿಸಿ ಆಧುನಿಕ ಸೌಲಭ್ಯಗಳ ಮೂಲಕ ಚಿಕಿತ್ಸೆ ನೀಡಲು ಹೊಸ ಸವಾಲಿಗೆ ಮುಂದಾಗಿದ್ದೇವೆ. ಈ ಸೇವೆ ಸಮಾಜಮುಖಿಯಾಗಿರುತ್ತದೆ.

ನೂತನ ಕೇಂದ್ರದಲ್ಲಿ ಕೇವಲ ಚಿಕಿತ್ಸೆಯಷ್ಟೆ ಅಲ್ಲದೆ, ಸಂಶೋಧನೆ, ಹೊಸ ಆವಿಷ್ಕಾರಗಳನ್ನು ನಡೆಸುವುದು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನಕ್ಕೆ ಪೂರಕವಾದ ವಾತಾವರಣ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು. ಜಯದೇವ ಹೃದಯ ಆಸ್ಪತ್ರೆಯಂತೆ ಕಡಿಮೆ ದರದಲ್ಲಿ ಚಿಕಿತ್ಸೆಗೆ ಆದ್ಯತೆ ನೀಡಿ, ವಾಣಿಜ್ಯೀಕರಣಗೊಳಿಸುವುದಕ್ಕಿಂತ ಮಿಗಿಲಾಗಿ ಜನಸೇವೆಗೆ ಹೆಚ್ಚು ಉಪಯೋಗಿಸಲಾಗುವುದು. ತಂದೆ ಡಾ.ಎಚ್.ಎಂ.ಗಂಗಾಧರಯ್ಯ ದೂರದರ್ಶಿತ್ವ ಮತ್ತು ಸಹೋದರ ಡಾ.ಜಿ.ಶಿವಪ್ರಸಾದ್ ಆಶಯದಂತೆ ಸಮಾಜದ ಕಟ್ಟಕಡೆಯ ಬಡಜನರಿಗೆ ಆರೋಗ್ಯ ಸೇವೆ ದೊರಕಿಸಲಾಗುತ್ತಿದೆ ಎಂದರು.

ಕಾರ್ಡಿಯಾಕ್ ಫ್ರಾಂಟಿಡಾ ಸಂಸ್ಥೆ ಸಹಯೋಗದೊಂದಿಗೆ ಹೃದಯಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ಜನಸಾಮಾನ್ಯರಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು. ಕಾರ್ಡಿಯಾಕ್ ಫ್ರಾಂಟಿಡಾ ನಿರ್ದೇಶಕ ಹಾಗೂ ಸಿದ್ಧಾರ್ಥ ಅಡ್ವಾನ್ಸ್ ್ಡಹಾರ್ಟ್ ಸೆಂಟರ್ ಮುಖ್ಯಸ್ಥ ಡಾ.ತಮಿನ್ ಅಹಮದ್ ಮಾತನಾಡಿ, ಶಿವಮೊಗ್ಗದಿಂದ ಬೆಂಗಳೂರು, ದಾವಣಗೆರೆಯಿಂದ ಬೆಂಗಳೂರು ಮಾರ್ಗ, ಮೈಸೂರು-ತುಮಕೂರು ನಡುವೆ ಸುಸಜ್ಜಿತ ಹೃದಯ ಆಸ್ಪತ್ರೆ ಇಲ್ಲದಿರುವುದನ್ನು ಮನಗಂಡ ಸಿದ್ಧಾರ್ಥ ಸಂಸ್ಥೆ ನೂತನವಾಗಿ ಹೃದಯರೋಗ ಚಿಕಿತ್ಸಾ ಕೇಂದ್ರ ತೆರೆಯುತ್ತಿರುವುದರಿಂದ ಜನಸಾಮಾನ್ಯರಿಗೆ ಉಪಯೋಗವಾಗಲಿದೆ ಎಂದರು.

ಸಿದ್ಧಾರ್ಥ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಡಾ.ಜಿ.ಎಸ್.ಆನಂದ್, ಕನ್ನಿಕಾ ಪರಮೇಶ್ವರ, ಉಪಕುಲಪತಿ ಡಾ.ಪಿ.ಬಾಲಕೃಷ್ಣ ಶೆಟ್ಟಿ, ಸಿಇಒ ಪಿ.ಕೆ.ಡಾ.ದೇವದಾಸ್, ಪ್ರಾಚಾರ್ಯ ಡಾ.ಎ.ಜಿ.ಶ್ರೀನಿವಾಸಮೂರ್ತಿ, ಉಪ ಪ್ರಾಂಶುಪಾಲ ಡಾ.ಪ್ರಭಾಕರ್, ಐಎಎಸ್ ಅಧಿಕಾರಿ ಅತೀಕ್, ಜಿಲ್ಲಾ ಶಸಚಿಕಿತ್ಸಕ ಡಾ.ವೀರಭದ್ರಯ್ಯ, ಮತ್ತಿತರರು ಇದ್ದರು.