ಜಿಲ್ಲೆ

ಘೂಳನೂರದಲ್ಲಿ ಸಿದ್ಧಾರೂಢರ ಪುರಾಣ ಪ್ರಾರಂಭೋತ್ಸವ ಜ.೪ರಂದು

ಕಲಬುರಗಿ : ಅಫಜಲಪುರ ತಾಲೂಕಿನ ಘೂಳನೂರ ಗ್ರಾಮದ ಗುರು ಸಿದ್ದರಾಮೇಶ್ವರ ಹಿರೇಮಠ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಶ್ರೀ ಸಿದ್ಧಾರೂಢರ ಪುರಾಣ ಪ್ರಾರಂಭೋತ್ಸವವು ಜ.೪ರಂದು ಸಂಜೆ ೭ ಗಂಟೆಗೆ ಜರುಗಲಿದೆ. ೧೪ ದಿನಗಳ ಕಾಲ ನಿರಂತರವಾಗಿ ಪುರಾಣ ನಡೆಯಲಿದೆ.

ಶ್ರೀಮಠದಲ್ಲಿರುವ ವಿಜಯಲಕ್ಷಿö್ಮÃ ದೇವೇಂದ್ರಪ್ಪಗೌಡ ಗೌಡಗೇರಿ ಮಂಗಲ ಕಾರ್ಯಾಲಯದಲ್ಲಿ ಕಲಬುರಗಿ ಗುರುಬಸವ ಮಠದ ಶಿವಾನಂದ ಮಹಾಸ್ವಾಮೀಜಿ ಹಾಗೂ ಗದ್ದುಗೆಮಠ ಚರಲಿಂಗ ಮಹಾಸ್ವಾಮಿಗಳ ಸನ್ನಿಧಾನದಲ್ಲಿ ಸಂಜೆ ೭ ಗಂಟೆಗೆ ಶಾಸಕ ಎಂ.ವೈ.ಪಾಟೀಲ್ ಅವರು ಪುರಾಣ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ ವಹಿಸುವರು.

ಶ್ರೀಶೈಲ ಸಾರಂಗಮಠ ಮತ್ತು ಕಲಬುರಗಿಯ ಸುಲಫಲ ಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿಗಳ ದಿವ್ಯ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ನೀಲಕಂಠ ಮೂಲಗೆ, ಜಿಲ್ಲಾ ವೀರಶೈವ ಸಮಾಜ ಅಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಉದ್ಯಮಿಗಳಾದ ಸಮಾಜ ಸೇವಕ ಶಿವಕಾಂತ ಮಹಾಜನ್, ಅಧಿಕಾರಿ ಶಿವಶರಣಪ್ಪ ಬೆಣ್ಣೂರ, ಪ್ರಮುಖರಾದ ಪ್ರವೀಣ ಪಾಟೀಲ್ ಹರವಾಳ, ಕಲ್ಯಾಣರಾವ ಹಸರಗುಂಡಗಿ,ಸುಭಾಷ ಓಗಿ,ಮಲ್ಲಿಕಾರ್ಜುನ ಖೇಮಜಿ, ಮಹೇಶ ಪಟ್ಟಣ,ಸೋನು ಪಟೇಲ್, ಚಂದ್ರಶೇಖರ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್ ಇತರರು ಪಾಲ್ಗೊಳ್ಳುವರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಭಕ್ತ ಮಂಡಳಿ ತಿಳಿಸಿದೆ.