ಜಿಲ್ಲೆ

ಧನಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಸಿದ್ದರಾಜು ಅವಿರೋಧ ಆಯ್ಕೆ

ಮೈಸೂರು: ಮೈಸೂರು ತಾಲೂಕು ಧನಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿದ್ದರಾಜು ಅವಿರೋಧ ಆಯ್ಕೆಯಾದರು.

ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ, ರೈತರ, ಮಹಿಳೆಯರ ಪರ ಸರ್ಕಾರವಾಗಿದ್ದು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ನೀಡುತ್ತಿದೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ನೂತನ ಅಧ್ಯಕ್ಷ ಸಿದ್ದರಾಜು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬಿ.ಗುರುಸ್ವಾಮಿ ಮಾತನಾಡಿ, ಸಹಕಾರ ಸಂಘದಲ್ಲಿ 1,934 ಜನ ಸದಸ್ಯರಿದ್ದು ಅದರಲ್ಲಿ 588 ಜನ ರೈತರಿಗೆ 6.20 ಕೋಟಿ ರೂ.ಬೆಳೆ ಸಾಲ ನೀಡಿದ್ದೇವೆ. ಸಂಘಕ್ಕೆ 11ಲಕ್ಷ ರೂ. ಆದಾಯ ಬಂದಿದೆ ಎಂದರು.

ನಿರ್ದೇಶಕರಾದ ಎಸ್.ಬಸಪ್ಪ, ಮಾದನಾಯ್ಕ, ಜವರೇಗೌಡ, ಬಸವೇಗೌಡ, ಜಿ.ಎ.ರಾಜೇಗೌಡ, ಚಿಕ್ಕಣ್ಣ, ಬಿ.ಕಾಳಲಿಂಗೇಗೌಡ, ಕೃಷ್ಣಮೂರ್ತಿ, ತಿಮ್ಮಮ್ಮ, ವ್ಯವಸ್ಥಾಪಕ ಎಂ.ಗಿರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ತಾಪಂ ಮಾಜಿ ಸದಸ್ಯ ಸಿ.ಎಂ.ಸಿದ್ದರಾಮೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಸೋಮಣ್ಣ, ಮುಖಂಡರಾದ ಬಸವರಾಜು, ನಂಜುಂಡೇಗೌಡ, ಧನಗಳ್ಳಿ ಬಸವರಾಜು, ಅಂದಾನಿ ಚಂದ್ರು, ಶಿವರಾಜೇಗೌಡ, ಮನೋಜ್ ಕೋಟೆಹುಂಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ. ಕೃಷ್ಣ ಇದ್ದರು.