ಮಾಡ್ರಹಳ್ಳಿ ಮಠದ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಿದ್ದೇಶ್ವರ ಶ್ರೀ ಗಳು ಹಾಗೂ ಶಿವಾನಂದ ಶರ್ಮ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಸಿ.ಎಂ.ಪ್ರಕಾಶ್, ಬಿ.ಎಂ. ಶಿವಮಲ್ಲಪ್ಪ, ಕೆ.ಎನ್.ಪ್ರಭುಸ್ವಾಮಿ, ಡಾ.ಎಂ.ಮಾದೇಶ್, ಆರ್.ಮಣಿಕಂಠರಾಜ್ ಗೌಡ, ಮೂಗೂರು ಕುಮಾರಸ್ವಾಮಿ ಇದ್ದರು. 
ಜಿಲ್ಲೆ

ಸಿದ್ದೇಶ್ವರ ಶ್ರೀಗಳು, ಶಿವಾನಂದ ಶರ್ಮಾ ಶಿಕ್ಷಣ ಕ್ಷೇತ್ರದ ಜ್ಞಾನಿಗಳು

ತಿ.ನರಸೀಪುರ: ಸಿದ್ದೇಶ್ವರ ಶ್ರೀಗಳು ಹಾಗೂ ಶಿವಾನಂದ ಶರ್ಮಾ ಅವರು ಶಿಕ್ಷಣ ಕ್ಷೇತ್ರದ ದೊಡ್ಡ ಜ್ಞಾನಿಗಳು ಎಂದು ವಾಟಾಳು ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

ಪಟ್ಟಣದ ಮಾಡ್ರಹಳ್ಳಿ ಮಠದ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ದೇಶ್ವರ ಶ್ರೀಗಳ ಹಾಗೂ ವಿದ್ಯೋದಯ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಶಿವಾನಂದ ಶರ್ಮಾ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಶಿವಾನಂದ ಶರ್ಮಾ ಅವರು ವಿದ್ಯೋದಯ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದರಿಂದ ಸಹಸ್ರಾರು ವಿದ್ಯಾರ್ಥಿಗಳು ವಿದ್ಯಾವಂತರಾಗಿ ಅನೇಕ ಹುದ್ದೆ ಅಲಂಕರಿಸುವಂತಾಯಿತು. ಅಂತೆಯೇ ಸಿದ್ದೇಶ್ವರ ಸ್ವಾಮೀಜಿ ಅವರು ದೇಶ ಕಂಡ ಎರಡನೇ ವಿವೇಕಾನಂದ ಎಂದರು.

ಮಾಡ್ರಹಳ್ಳಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಹಾಗೂ ಶಿವಾನಂದ ಶರ್ಮ ಸರಳ ವ್ಯಕ್ತಿಗಳಾಗಿದ್ದು, ನುಡಿದಂತೆ ನಡೆದರು. ಇಂತಹವರ ಸ್ಮರಣೆ ಮಾಡುವುದು ನಮ್ಮ ಸೌಭಾಗ್ಯ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ, ಸೇವಾಶ್ರಯ ಫೌಂಡೇಷನ್ ಅಧ್ಯಕ್ಷ ಮಣಿಕಂಠರಾಜ್ ಗೌಡ, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಮಹದೇವಸ್ವಾಮಿ, ವಕೀಲ ಜ್ಞಾನೇಂದ್ರಮೂರ್ತಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಕೆಇಬಿ ಸಿದ್ದಲಿಂಗಸ್ವಾಮಿ, ಪೂಜಿತ್ ಮೆಡಿಕಲ್ ಕುಮಾರ್, ಗೌಡರ ಪ್ರಭು, ಆಲಗೂಡು ನಾಗರಾಜು, ಹಾಲಿನ ನಾಗರಾಜು, ಕುರುಬೂರು ನಾಗರಾಜು, ಡಾ.ಎಂ.ಮಾದೇಶ್, ಬಿಎಸ್‌ಎನ್‌ಎಲ್ ಶಿವಮೂರ್ತಿ ಇತರರಿದ್ದರು.