ಜಿಲ್ಲೆ

5ರಂದು ಸಿದ್ದೇಶ್ವರ ಸ್ವಾಮೀಜಿ ನೆನಪಿನ ಉಪನ್ಯಾಸ

ಅವಿನಾಶ್ ಜೈನಹಳ್ಳಿ

ಮುದ್ದುರಾಮ ಪ್ರತಿಷ್ಠಾನದ ವತಿಯಿಂದ ಸೆ.5 ರಂದು ಸಂಜೆ 5 ಗಂಟೆಗೆ ಸರಸ್ವತಿಪುರಂನಲ್ಲಿರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ನೆನಪಿನ ಉಪನ್ಯಾಸವನ್ನು ಏರ್ಪಡಿಸಲಾಗಿದೆ.

ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಮುಕ್ತಿದಾನಂದಜಿ ಮಹಾರಾಜ್ ಸಾನ್ನಿಧ್ಯದಲ್ಲಿ ವಾಗ್ಮಿ ಡಾ.ವೀಣಾ ಬನ್ನಂಜೆ ಉಪನ್ಯಾಸ ನೀಡಲಿದ್ದಾರೆ.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಡಿ.ಪಿ.ಪ್ರಕಾಶ್ ಆಶಯ ನುಡಿಯಾಡುವರು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಮೈಸೂರು ಗ್ರಾಮಾಂತರ ಸರ್ಕಾರಿ ಪ್ರಾಥಮಿಕ ಶಾಲೆಯ ಐವರು ಶಿಕ್ಷಕರನ್ನು ಹಾಗೂ 1000 ಮುದ್ದುರಾಮ ಚಿತ್ರಚೌಪದಿಗಳ ಸಂಯೋಜಕ ವಿಶ್ವನಾಥ್ ಬಳುವನೇರಲು ಅವರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.