ಹುಬ್ಬಳ್ಳಿ: ಇಲ್ಲಿಯ ನವನಗರದ ಚಿಕೇನಕೊಪ್ಪ ಚನ್ನವಿರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸತ್ಸಂಗ ಹಾಗೂ ದಾಸೋಹ ಸೇವಾ ಸಮಿತಿ ವತಿಯಿಂದ ಏರ್ಪಡಿಸಿರುವ ಶ್ರದ್ಧಾಸ್ಮರಣೆ ಪ್ರವಚನ ಕಾರ್ಯಕ್ರಮವನ್ನು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು.
ಕಿರೇಸೂರ- ವಿಜಯಪುರದ ಗೌರಿಶಂಕರ ಬಿಲ್ವಾಶ್ರಮ ಬೃಹನ್ಮಠದ ಶ್ರೀ ಸಿದ್ದಲಿಂಗ ದೇವರು ಪ್ರವಚನ ನೀಡಿದರು.
ನಾವೆಲ್ಲ ಕಂಡಂತೆ ಸಿದ್ದೇಶ್ವರ ಶ್ರೀಗಳು ವಿಶ್ವವಿದ್ಯಾಲಯವೇ ಆಗಿದ್ದರು. ಅವರು ತಮ್ಮ ಪ್ರವಚನಗಳ ಮೂಲಕ ನಮ್ಮೆಲ್ಲರ ಮನೆ, ಮನಗಳಲ್ಲಿ ನೆಲೆಯೂರಿದವರು. ಅವರ ವಚನಾಮೃತ ನಮ್ಮೆಲ್ಲರ ಜೀವನಕ್ಕೆ ದಾರಿದೀಪ ಎಂದು ಹೇಳಿದರು.
ಸ್ವಾಮಿ ಮಹಾಜನ ಶೆಟ್ಟರ್, ಸತೀಶ ಮೂರೂರ, ಜಂಗ್ಲೆಪ್ಪಗೌಡ್ರ, ಅಜ್ಜಪ್ಪ ಹೊರಕೇರಿ, ಪಾಲಿಕೆ ಸದಸ್ಯೆ ಸುನೀತಾ ಮಾಳವದಕರ, ಬಸನಗೌಡ ಸಿದ್ದನಗೌಡ್ರ, ರಮೇಶ ನಂದ್ಯಾಳ ಇತರರು ಇದ್ದರು.