ಜಿಲ್ಲೆ

ಸಿದ್ದೇಶ್ವರ ಶ್ರೀಗಳು ಜೇಬಿಲ್ಲದ ಖಾದಿ ತೊಟ್ಟಿರುವ ಸಂತರು: - ಶ್ರೀನಿವಾಸ ಹುಯಿಲಗೋಳ.

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ

ನಗರದ ವಿದ್ಯಾದಾನ ಶಿಕ್ಷಣ ಸಮಿತಿಯಲ್ಲಿ ಶುಕ್ರವಾರ ಸಿದ್ದೇಶ್ವರ ಶ್ರೀಗಳ ದ್ವೀತಿಯ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.

ಸಿದ್ದೇಶ್ವರ ಶ್ರೀಗಳು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಕಾರ್ಯದಶಿರ್ ಶ್ರೀನಿವಾಸ ಹುಯಿಲಗೋಳ, ಸಿದ್ದೇಶ್ವರ ಶ್ರೀಗಳು ಜೇಬಿಲ್ಲದ ಖಾದಿ ತೊಟ್ಟಿರುವ ಸಂತರು. " ಎಂದು ಸ್ಮರಿಸಿದರು. ಅದ್ವೀತಿಯ ಬದುಕು, ಸರಳತೆ, ಸಮಯಪಾಲನೆ ಮತ್ತು ಅವರ ಆದರ್ಶಗಳನ್ನು ಮಕ್ಕಳು ಅಳವಡಿಕೊಳ್ಳಬೇಕು ಎಂದರು.

ಡಾ. ಗಂಗೂಬಾಯಿ ಪವಾರ, ವಿ. ಪಿ. ಪಾಟೀಲ, ಎನ್​. ಜಿ. ಚನ್ನಪ್ಪಗೌಡ್ರ, ಬಸವರಾಜ ಕರಬಿಷ್ಠಿ, ಶಶಿಧರ ಹೊಸಳ್ಳಿ, ಎಸ್​. ವೈ. ಕಠಾರಿ ಇತರರು ಇದ್ದರು.