ಜಿಲ್ಲೆ

ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿಗೆ ಆಯ್ಕೆ, ಬಸವರಾಜ ಕಲ್ಯಾಣಶೆಟ್ಟರ ಪುನರಾಯ್ಕೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಶ್ರೀ ಸಿದ್ಧಾರೂಢ ಸ್ವಾಮಿ ಮಠದ ಟ್ರಸ್ಟ್ ಕಮೀಟಿ ಚೇರ್ಮನ್ರಾಗಿ ಬಸವರಾಜ ಸಿ. ಕಲ್ಯಾಣಶೆಟ್ಟರ್ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಶ್ರೀಮಠದಲ್ಲಿ ಧರ್ಮದರ್ಶಿ ಅಂದಾನಪ್ಪ ಚಾಕಲಬ್ಬಿ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಪದಾಧಿಕಾರಿಗಳ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ವೈಸ್ ಚೇರ್ಮನ್ ರಾಗಿ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದಶಿರ್ಯಾಗಿ ಸರ್ವಮಂಗಳಾ ಪಾಠಕ ಇವರು ಸಹ ಎರಡನೇ ಬಾರಿಗೆ ಆಯ್ಕೆಯಾದರು. 2025ರ ಏಪ್ರಿಲ್ ವರೆಗಿನ ಅವಧಿಗೆ ಆಯ್ಕೆ ಮಾಡಲಾಯಿತು.

ಚರ್ಮದರ್ಶಿಗಳಾದ ರಮೇಶ ಬೆಳಗಾವಿ, ವೀರಪ್ಪ ಮಲ್ಲಾಪುರ, ಡಾ. ಗೋವಿಂದ ಮಣ್ಣೂರ, ಬಾಳು ಮಗಜಿಕೊಂಡಿ, ವಿನಾಯಕ ಘೋಡ್ಕೆ, ಚನ್ನವಿರ ಮುಂಗುರವಾಡಿ, ಉದಯಕುಮಾರ ನಾಯ್ಕ, ಗೀತಾ ಕಲಬುಗಿರ್, ಕೆ.ಎಲ್. ಪಾಟೀಲ, ಶಾಮಾನಂದ ಪೂಜೇರಿ, ವಿ.ಡಿ. ಕಾಮರಡ್ಡಿ, ಸಿದ್ಧನಗೌಡ ಪಾಟೀಲ, ವಸಂತ ಸಾಲಗಟ್ಟಿ ಹಾಗೂ ಮಠದ ಮ್ಯಾನೇಜರ್ ಈರಣ್ಣ ತುಪ್ಪದ ಉಪಸ್ಥಿತರಿದ್ದರು.