ವಿಜಯಪುರ: ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ೧೭೫ ವಾಹನಗಳಲ್ಲಿ ಕಾರ್ಯಕರ್ತರು ದಾವಣಗೆರೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿದರು.
ವಿಜಯಪುರ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಜನನಾಯಕ, ಸಕಲ ವರ್ಗಗಳ ಕಲ್ಯಾಣವನ್ನು ಬಯಸಿದ ನೇತಾರ. ಜಿಲ್ಲೆಗೆ ನೀಡಿದ ಕೊಡುಗೆ ಅನನ್ಯ. ಭಾಗ್ಯಗಳ ಸರದಾರ ಎಂದು ಬಣ್ಣಿಸಿದರು. ಕಾರ್ಯಕ್ರಮದ ಯಶಸ್ವಿಯಾಗಿ ಕೆಪಿಸಿಸಿ ಪ್ರಚಾರ ಅಧ್ಯಕ್ಷ ಎಂ.ಬಿ. ಪಾಟೀಲ ಹಗಲಿರುಳು ಶ್ರಮಿಸುತ್ತಿದ್ದು, ಕಾರ್ಯಕ್ರಮದ ಯಶಸ್ವಿಗೆ ನಾವು ಕೈ ಜೋಡಿಸಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ದಾವಣೆಗೆರೆಗೆ ಪ್ರಯಾಣ ಬೆಳೆಸಲಿದ್ದು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಲಿದ್ದೇವೆ ಎಂದು ಹೇಳಿದರು.
ಪ್ರಯಾಣದ ರೂಪುರೇಷೆ, ಪ್ರಯಾಣದ ಮಾರ್ಗ, ವಸತಿ ಸೇರಿದಂತೆ ವಿವಿಧ ಸಿದ್ಧತೆಗಳ ಕುರಿತು ಸುದೀರ್ಘವಾದ ಮಾಹಿತಿಯನ್ನು ಕಾರ್ಯಕರ್ತರಿಗೆ ಒದಗಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಕಡಾಗಲಾವ್, ಅರುಣ್ ಸಿಂಗ್ ಪರದೇಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಬಕ್ಷಿ, ಆರತಿ ಶಹಾಪುರ, ಮಾಜಿ ಕಾರ್ಪೊರೇಟರ್‌ಗಳಾದ ಶರಣಪ್ಪ ಯಕ್ಕುಂಡಿ, ರಾಜು ಜಾಧÀವ್, ಮೈನುದ್ದೀನ್ ಬಿಳಗಿ, ಜಮೀರ್ ಬಂಗಿ, ಅನ್ವರ್ ದ್ರಾಕ್ಷಿ, ಮುಖಂಡರಾದ ರವೀಂದ್ರ ಜಾಧವ್, ಧನರಾಜ್ ಎ, ಇರ್ಫಾನ ಶೇಖ, ಹೈದರ್ ನದಾಫ್, ಆಬಿದ್ ಸಂಗಮ್, ಆಸ್ಮಾ ಖಾಲಿಬಾಗ, ಮಂಜುಳಾ ಜಾಧÀವ್, ಮಿರಾಸಾಬ ಮುಲ್ಲಾ, -ೆÊರೋಜ್ ಷೇಕ್, ಅಕ್ರಮ ಜಾಹಗೀರದಾರ, ಸರ್ದಾರ್ ಪಟೇಲ್, ಮೈನು ಖಾಜಿ, ಅರುಣ್ ಭಜಂತ್ರಿ, ಕನ್ನಾನ್ ಮುಶ್ರೀಫ್, ಅಶೋಕ್ ಜಾಧವ್, ಸುಭಾಷ್ ಜಾಧವ್ ಪಾಲ್ಗೊಂಡಿದ್ದರು.