ಜಿಲ್ಲೆ

ಶ್ರೀ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಬೆಂಗೇರಿ ಗೋಪನಕೊಪ್ಪ ಸಿದ್ದರಾಮ ನಗರದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಸದ್ಭಕ್ತ ಮಂಡಳಿ ವತಿಯಿಂದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ 67ನೇ ಜಾತ್ರಾ ಮಹೋತ್ಸವ ಜ. 10ರಿಂದ 14ರ ವರೆಗೆ ಏರ್ಪಡಿಸಲಾಗಿದೆ.

ನವಅಯೋಧ್ಯಾನಗರ ಆರೂಢ ಆಶ್ರಮದ ಶ್ರೀ ಸದ್ಗುರು ಬಸವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಿತ್ಯ ಸಂಜೆ ಪ್ರವಚನ ನಡೆಯಲಿದೆ. ಜ. 11ರಂದು ಸಂಜೆ 6.30ಕ್ಕೆ ಶಿವಯೋಗಿಗಳ ಮಹಾಪೂಜೆ ನಂತರ ಪ್ರವಚನ ನಡೆಯಲಿದೆ.

ಜ. 12ರಂದು ಸಂಜೆ ಮಹಾತ್ಮರಿಗೆ ಮತ್ತು ಶಿವಯೋಗಿಗಳಿಗೆ ಭಕ್ತರಿಂದ ಮಹಾಪೂಜೆ ನೆರವೇರುವದು. ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಭಜನಾ ಕಾರ್ಯಕ್ರಮ ಇರುವುದು.

ಜ. 13ರಂದು ಬೆಳಗ್ಗೆ 11ಕ್ಕೆ ರಂಗೋಲಿ ಸ್ಪರ್ಧೆ, ಸಂಜೆ ವಿಜೇತರಿಗೆ ಬಹುಮಾನ ವಿತರಣೆ. ರಾತ್ರಿ 10.30ಕ್ಕೆ ಜಾಗರಣೆ ನಿಮಿತ್ತ ನಾಗಶೆಟ್ಟಿಕೊಪ್ಪದ ಶ್ರೀ ವೀರಮಾರುತಿ ಭಜನಾ ನಾಟ್ಯ ಸೇವಾ ಸಂದಿಂದ ಭಕ್ತಿಪ್ರಧಾನ ಭಜನೆಗಳು ಜರುಗಲಿವೆ.

ಜ. 14ರಂದು ಬೆಳಗ್ಗೆ 5.30ಕ್ಕೆ ಶ್ರೀ ಜಗದೀಶ ಶಾಸ್ತ್ರೀ, ಶ್ರೀಶೈಲನಾಥ ಶಾಸ್ತ್ರೀ ಉದಾಸ್ತಿ ಹಿರೇಮಠ ಅವರ ಸಾನ್ನಿಧ್ಯದಲ್ಲಿ ರುದ್ರಾಭಿಷೇಕ, ತೊಟ್ಟಿಲೋತ್ಸವ ನಂತರ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ಪಾಲಿಕೆ ಸದಸ್ಯ ಎಂ.ವೈ. ನರಗುಂದ ಮೆರವಣಿಗೆಗೆ ಚಾಲನೆ ನೀಡುವರು ಎಂದು ಭಕ್ತ ಮಂಡಳಿ ಅಧ್ಯಕ್ಷ ಆನಂದ ಬೇವಿನಕಟ್ಟಿ, ಕಾರ್ಯದರ್ಶಿ ಕಲ್ಮೇಶ ಹಾಲಕೇರಿ ತಿಳಿಸಿದ್ದಾರೆ.