ಜಿಲ್ಲೆ

ಸಿದ್ಧರಾಮೇಶ್ವರ ಪುರಾಣ ಫೆ.16ರಿಂದ

ಕಲಬುರಗಿ: ಆಳಂದ ರಸ್ತೆಯ ವಿಜಯ ನಗರ ಕಾಲನಿಯಲ್ಲಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಶ್ರೀ ಮಲ್ಲಿಕಾರ್ಜುನ ಸೇವಾ ಸಂಘದಿಂದ ಫೆ.16ರಿಂದ 26ರವರೆಗೆ ನಿತ್ಯ ರಾತ್ರಿ 7ರಿಂದ ಸೊಲ್ಲಾಪುರದ ಶ್ರೀ ಸಿದ್ಧರಾಮ ಶಿವಯೋಗಿಗಳ ಪುರಾಣ ಹಮ್ಮಿಕೊಳ್ಳಲಾಗಿದೆ. ಶ್ರೀ ಪ್ರಸನ್ನ ರೇಣುಕ ವೀರ ಗಂಗಾಧರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಪ್ರಭಯ್ಯ ಶಾಸ್ತ್ರೀ ಹಿರೇಮಠ ಪುರಾಣ ನಡೆಸಿಕೊಡಲಿದ್ದು, ಕಲ್ಯಾಣಕುಮಾರ ಭಂಟನಳ್ಳಿ ಸಂಗೀತಕ್ಕೆ ಸೋಮಶೇಖರ ಕಲ್ಯಾಣಿ ತಬಲಾ ಸಾಥ್ ನೀಡಲಿದ್ದಾರೆ. ಅರ್ಚಕ ಸಿದ್ಧಲಿಂಗಯ್ಯ ಶಾಸ್ತ್ರೀ ನರೋಣಾ ನಿರ್ವಹಣೆ ಮಾಡಲಿದ್ದಾರೆ.

ಫೆ.26ರಂದು ಸಂಜೆ 6ಕ್ಕೆ ದೀಪೋತ್ಸವ, ಪುರಾಣ ಮಂಗಲೋತ್ಸವ ನಡೆಯಲಿದೆ. ಫೆ.27ರಂದು ಮಧ್ಯಾಹ್ನ 12.30ರಿಂದ ಮಹಾಪ್ರಸಾದ ಇರಲಿದೆ. ಪುರಾಣ ನಂತರ ನಿತ್ಯ ಅನ್ನದಾಸೋಹ ಇರಲಿದೆ. ಮಾಹಿತಿಗೆ ೯೮೪೫೭೬೭೭೭೨, ೯೪೪೮೧೩೯೮೮೨ ಸಂಪರ್ಕಿಸಬೇಕು ಎಂದು ಸದ್ಬಕ್ತ ಮಂಡಳಿ ತಿಳಿಸಿದೆ.