ಜಿಲ್ಲೆ

ಸಿದ್ದರಾಮಯ್ಯ ಜನ್ಮ ದಿನಾಚರಣೆ : ಮೈಸೂರಿನಲ್ಲಿ ಸಹಪಂಕ್ತಿ ಭೋಜನ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮ ದಿನದ ಪ್ರಯುಕ್ತ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ನಗರದ ಬುದ್ಧ ವಿಹಾರದಲ್ಲಿ ಸಹಪಂಕ್ತಿ ಭೋಜನ ಆಯೋಜಿಸಲಾಗಿತ್ತು.

ಸಾಹಿತಿಗಳು, ಪ್ರಗತಿಪರ ಚಿಂತಕರು, ಅಲ್ಪಸಂಖ್ಯಾತ ಮುಖಂಡರು, ದಲಿತರು, ಹಿಂದುಳಿದ ವರ್ಗದವರು, ಪೌರ ಕಾರ್ಮಿಕರು ಕಾಂಗ್ರೆಸ್ ಕಾರ್ಯಕರ್ತರು ಸಹಪಂಕ್ತಿ ಭೋಜನದಲ್ಲಿ ಭಾಗವಹಿಸಿದರು.

ಆದಿ ಕರ್ನಾಟಕ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಜ್ಞಾನ ಸ್ವರೂಪಾನಂದ ಸ್ವಾಮೀಜಿ ವಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮುಖ್ಯಮಂತ್ರಿ ಸಿದ್ದರಾಮಂ್ಯು ಅಳವಡಿಸಿಕೊಂಡಿದ್ದಾರೆ. ಬಡವರ ಬಗ್ಗೆ ಕಾಳಜಿ, ಜಾತ್ಯತೀತ ನಿಲುವುಗಳು ಅವರನ್ನು ಸಮರ್ಥ ರಾಜಕಾರಣಿಯಾಗಿ ರೂಪಿಸಿದೆ. ರಾಜ್ಯದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬದುಕಿಗೆ ಗ್ಯಾರಂಟಿ ಂೋಜನೆಗಳು ಬೆಳಕಾಗಿವೆ ಎಂದು ಹೇಳಿದರು.

ಈ ಸಂದರ್ಭ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಂುಕುವಾರ್, ಸಂವಿಧಾನ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ಸಮಾಜ ಸೇವಕ ಕೆ.ರಘುರಾಮ ವಾಜಪೇಯಿ, ವಾಜಿ ಮೇಯರ್ ಪುರುಷೋತ್ತಮ್, ವಕೀಲ ಶಿವಪ್ರಸಾದ್, ದಲಿತ ನವ ನಿರ್ಮಾಣ ವೇದಿಕೆಯ ಹರಿಹರ ಆನಂದಸ್ವಾಮಿ, ಉಪ್ಪಾರ ಸಂಘದ ಂೋಗೇಶ್ ಉಪ್ಪಾರ್ ಹಾಗೂ ಇತರರು ಇದ್ದರು.