ಜಿಲ್ಲೆ

ದಯವಿಟ್ಟು ಬರೀರಿ! ಪತ್ರಕರ್ತರಿಗೆ ಪಾಠ -ಸಿಎಂ ಸಿದ್ದರಾಮಯ್ಯ

Gadag - Shivanand Hiremath

ಗದಗ: ತಪ್ಪಾಗಿ ಅರ್ಥೈಸಿಕೊಂಡು ಬರೆಯಬೇಡಿ. ಬಿಜೆಪಿಗಿಂತ 3000 ಕೋಟಿ ರೂ. ಅಧಿಕ ಹಣವನ್ನು ಅಭಿವೃದ್ಧಿಗೆ ಖರ್ಚು ಮಾಡಿದ್ದೇವೆ. ಕೊಟ್ಟ ಮಾತಿನಂತೆ ಕಾಂಗ್ರೆಸ್​ ನಡೆದಿದೆ. ಜನರ ವಿಶ್ವಾಸ ಗಳಿಸಿದೆ. ಬಿಜೆಪಿ ಪಕ್ಷ ಸುಳ್ಳಿನ ಖಾರ್ಕಾನೆ ಇದ್ದಂತೆ. ಇಂತಹ ವಿಷಯಗಳನ್ನು ದಯವಿಟ್ಟು ಬರೀರಿ ಎಂದು ಸಿಎಂ ಸಿದ್ದರಾಮಯ್ಯ ಸ್ವಲ್ಪ ಕೋಪದಿಂದಲೇ ಪತ್ರಕರ್ತರಿಗೆ ಪಾಠ ಮಾಡಿದರು.
ಪತ್ರಕರ್ತರು ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ, ಇತಿಹಾಸ ಮೆಲಕು ಹಾಕಿದ್ದಲ್ಲದೇ ಪತ್ರಕರ್ತರು ಪ್ರಶ್ನೆ ಕೇಳುವ ಸಂದರ್ಭದಲ್ಲಿ ಪೂರ್ವಾಭ್ಯಾಸ ಇರಬೇಕೆಂದು ಪರೋಕ್ಷವಾಗಿ ತಿವಿದರು. ನವೆಂಬರ್​ ತಿಂಗಳಾಂತ್ಯದ ವರೆಗೆ ಬಿಜೆಪಿ 70814 ಕೋಟಿ ರೂ. ಅಭಿವೃದ್ಧಿಗೆ ಹಣ ವ್ಯಯಿಸಿದೆ. ಕಾಂಗ್ರೆಸ್​ ಸರ್ಕಾರ ಬಜೆಟ್​ ಮಂಡನೆ ನಂತರ 73928 ಕೋಟಿ ರೂ. ಅಭಿವೃದ್ಧಿಗೆ ಹಣ ವ್ಯಯಿಸಿದೆ. ಗ್ಯಾರಂಟಿಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.