ಜಿಲ್ಲೆ

ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು

Uttara Kannada - Subash Hegde

ಕಾರವಾರ: ಮುಡಾ ಹಗರಣದ ಸಮರ್ಪಕ ತನಿಖೆಯಾಗಲು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಸಂಸದ  ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ಸಂಸದರ ನವೀಕೃತ ಕಚೇರಿಯನ್ನು ಉದ್ಘಾಟಿಸಿ ಅವರು ಮಾಧ್ಯಮ‌ ಪ್ರತಿನಿಧಿಗಳ ಮಾತನಾಡಿದರು.

ಅಧಿಕಾರದಲ್ಲಿ ಮುಂದುವರಿದರೆ ಅಧಿಕಾರಿಗಳಿಗೆ ತನಿಖೆ ನಡೆಸಲು ಮುಜುಗರ ಆಗಲಿದೆ. ತನಿಖೆ ಮೇಲೆ ಅವರು ಒತ್ತಡ ಬೀರುವ ಸಾಧ್ಯತೆ ಇದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಸಂದರ್ಭದಲ್ಲೇ ರಾಜೀನಾಮೆ ನೀಡಿ ತಮ್ಮ ಗೌರವ ಉಳಿಸಿಕೊಳ್ಳಲಿ ಎಂದು ಹೇಳಿದರು.

ವರದಿಯನ್ನು ಜನರಿಗೆ ತೊಂದರೆಯಾಗದಂತೆ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರದ ಮಟ್ಟದಲ್ಲಿ ನಾನೂ ಸೇರಿದಂತೆ ರಾಜ್ಯದ ಸಂಸದರು ಪ್ರಯತ್ನಿಸುತ್ತೇನೆ. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತನ್ನ ಸ್ಪಷ್ಟ ನಿಲುವು ತಿಳಿಸಬೇಕು ಎಂದು ಒತ್ತಾಯಿಸಬೇಕು ಎಂದರು.

ಸಂಸದರ ಕಚೇರಿ ಜನಸ್ನೇಹಿಯಾಗಿ ಇರಲಿದೆ. ಕ್ಷೇತ್ರದ ಜನರು ಯಾವುದೇ ಸಮಯದಲ್ಲಿಯೂ ತಮ್ಮ ಅಹವಾಲುಗಳನ್ನು ಕಚೇರಿಗೆ ಸಲ್ಲಿಸಬಹುದು. ಸಂಸದರ ಕೆಲಸದ ಬಗ್ಗೆ ಮಾಹಿತಿಯನ್ನೂ ಪಡೆಯಬಹುದು' ಎಂದರು.