siddaramayya 
ಜಿಲ್ಲೆ

ಸಿದ್ದರಾಮಯ್ಯ ನಮ್ಮ ನಾಯಕರು ಎಂದ ಬಿಜೆಪಿ ಸಚಿವ!

ಮೈಸೂರು: ನಾವು ಯಾವುದೇ ಪಕ್ಷದಲ್ಲಿ ಇದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ನಾಯಕರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್​.ಟಿ. ಸೋಮಶೇಖರ್​ ಹೇಳಿದರು.

ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ "ಮಾಸಿಕ ಸಾಮೂಹಿಕ ವಿವಾಹ-95' ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿದ್ದರಾಮಯ್ಯ ನಮ್ಮ ಹಳೇ ನಾಯಕರು. ಕಾಂಗ್ರೆಸ್​ ಬಿಟ್ಟ ಮೇಲೆ ಸಿದ್ದರಾಮಯ್ಯರ ಜತೆ ಮೊದಲ ಬಾರಿಗೆ ವೇದಿಕೆ ಹಂಚಿಕೊಂಡಿದ್ದೇನೆ. ಬಹಳ ಸಂತೋಷದಿಂದ ಮಾತನಾಡಿಸಿದರು ಎಂದರು. ಇದನ್ನೂ ಓದಿರಿ ಕಾಂಗ್ರೆಸ್​ನ ಹಿರಿಯ ನಾಯಕ ಮತ್ತು ಅವರ ಪುತ್ರನಿಗೆ ಬೆದರಿಕೆ ಕರೆ!

'ಸಾಮೂಹಿಕ ವಿವಾಹ ಕಾರ್ಯಕ್ರಮದ ವೇದಿಕೆಯಲ್ಲಿ ನಾನು ಮಾತನಾಡೋಲ್ಲ ನೀವೇ ಮಾತನಾಡಿ' ಎಂದು ಸಿದ್ದರಾಮಯ್ಯಗೆ ಹೇಳಿದೆ. ಅದಕ್ಕೆ 'ಬಹಳ ಕಿಲಾಡಿ ಇದ್ದೀಯಾ ನೀನು' ಅಂತ ಅವರು ಹಾಸ್ಯ ಮಾಡಿದರು. ಅವರು ಜಿಲ್ಲೆಯ ಒಂದೆರಡು ಕೆಲಸಗಳನ್ನು ಮಾಡಿಕೊಡುವಂತೆ ಹೇಳಿದ್ದಾರೆ. ಆ ಕೆಲಸಗಳನ್ನು ಪರಿಶೀಲನೆ ಮಾಡಿ ಅವರ ಗಮನಕ್ಕೆ ತರುತ್ತೇನೆ ಎಂದರು.