Oplus_131072 
ಜಿಲ್ಲೆ

ಚೆನ್ನಾಂಗಿ ವ್ಯಾಪ್ತಿಯಲ್ಲಿದ್ದ 32 ಆನೆಗಳು ಕಾಡಿಗೆ

ಎ. ಆರ್. ರಘುರಾಮ

ಅರಣ್ಯ ಇಲಾಖೆ ಸಿಬ್ಬಂದಿ ಸಾಹಸ
ವಿಜಯವಾಣಿ ಸುದ್ದಿ ಜಾಲ ಸಿದ್ದಾಪುರ : ತಿತಿಮತಿ ಅರಣ್ಯ ವಲಯದ ಚೆನ್ನಾಂಗಿ ಶಾಖಾ ವ್ಯಾಪ್ತಿಯ ಬಾಡಗಬಾಣಂಗಾಲ, ಹುಂಡಿ, ಮಠ, ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದ 32 ಆನೆಗಳನ್ನು ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟುವಲ್ಲಿ ಸಫಲರಾದರು.
ಕಾಫಿ ತೋಟಗಳ ಮಾರ್ಗದಲ್ಲಿ ತೆರಳಿದ ಅರಣ್ಯ ಇಲಾಖೆಯ 20ಕ್ಕೂ ಹೆಚ್ಚು ಸಿಬ್ಬಂದಿ ಬಾಡಗ ಬಾಣಂಗಾಲ ಗ್ರಾಮದ ಬಾಣಂಗಾಲ ಎಸ್ಟೇಟ್ ನಿಂದ ಮಾರ್ಗೊಳ್ಳಿ ಎಸ್ಟೇಟ್ ಮೂಲಕ ಸುಮಾರು 8 ಕಿಮೀ ದೂರದಲ್ಲಿರುವ
ಹುಂಡಿ, ಮಠ, ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದ ಆನೆಗಳ ಹಿಂಡನ್ನು ಪಟಾಕಿ ಸಿಡಿಸಿ, ಕಾಡಿಗೆ ಅಟ್ಟುವಲ್ಲಿ ಸಿಬ್ಬಂದಿ ಯಶಸ್ವಿಯಾದರು. ಆನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿ ಕಾರ್ಮಿಕರು ಹಾಗೂ ಬೆಳೆಗಾರರಲ್ಲಿ ವಾರದಿಂದ ಆತಂಕ ಸೃಷ್ಟಿಸಿದ್ದವು. ಆನೆ ಕಾರ್ಯಾಚರಣೆ ಬಗ್ಗೆ ಮೊದಲೇ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲಾಗಿತ್ತು.