ಸಿದ್ದಾಪುರದಲ್ಲಿ ಮಹಿಳೆಯರ ಜ್ಞಾನ ವಿಕಾಸ ಕೇಂದ್ರ ಆರಂಭ ಹಿನ್ನೆಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಅಧಿಕಾರಿ ಎಂ.ಕೆ.ಕಾಂತಪ್ಪ ಉದ್ಘಾಟಿಸಿದರು. 
ಜಿಲ್ಲೆ

ಸಿದ್ದಾಪುರದಲ್ಲಿ ಮಹಿಳೆಯರ ಜ್ಞಾನ ವಿಕಾಸ ಕೇಂದ್ರ ಉದ್ಘಾಟನೆ

ಸಿದ್ದಾಪುರ: ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಂದಿರುವ ಮೂಲಕ ಸಬಲೆಯರು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಅಧಿಕಾರಿ ಎಂ.ಕೆ.ಕಾಂತಪ್ಪ ಹೇಳಿದರು.

ಗ್ರಾಮದ ವೆಂಕಟೇಶ್ವರ ದೇವಸ್ಥಾನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಮಹಿಳೆಯರ ಜ್ಞಾನ ವಿಕಾಸ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಸ್ವವಲಂಬಿ ಜೀವನ ನಡೆಸಬೇಕು ಎನ್ನುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದ್ದು, ಅದಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದೆ. ಸ್ತ್ರೀಯರು ಜವಾಬ್ದಾರಿ ಅರಿತು ಬಾಳ್ವೆ ನಡೆಸುತ್ತಿದ್ದಾರೆ. ಪ್ರತಿಯೊಬ್ಬರಲ್ಲಿ ಇರುವ ಕಲೆಯನ್ನು ಗುರುತಿಸುವ ಕೆಲಸ ಮಾಡಬೇಕು. ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದುಪಯೋಗ ಪಡೆಯಿರಿ ಎಂದರು.

ಗ್ರಾಪಂ ಮಾಜಿ ಸದಸ್ಯೆ ಪಾರ್ವತಮ್ಮ, ಒಕ್ಕೂಟದ ಅಧ್ಯಕ್ಷೆ ಸರ್ವಮಂಗಳ, ಜ್ಞಾನ ವಿಕಾಸ ಕೇಂದ್ರದ ಸಮನ್ವಯ ಅಧಿಕಾರಿ ಲಕ್ಷ್ಮೀ, ಸೇವಾ ಪ್ರತಿನಿಧಿಗಳಾದ ಗಂಗಮ್ಮ, ಭಾಗ್ಯ ಇತರರಿದ್ದರು.