ಜಿಲ್ಲೆ

ಸಂಪಗೋಡ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ

ಸಿದ್ದಾಪುರ: ತಾಲೂಕಿನ ಸಂಪಗೋಡ ಗ್ರಾಮದ ಬೊಮ್ಮಜನಿಯಲ್ಲಿ ಚಿರತೆಯೊಂದು ರಾತ್ರಿ ಮನೆ ಅಂಗಳದವರೆಗೂ ನಿತ್ಯ ಬಂದು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಐದಾರು ದಿನಗಳಿಂದ ಬೊಮ್ಮಜನಿಯ ಎಂ.ಆರ್. ಹೆಗಡೆ ಅವರ ಮನೆಯ ಸುತ್ತಮುತ್ತ ನಿತ್ಯ ಚಿರತೆ ಬಂದು ಹೋಗುತ್ತಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಇದೇ ಮನೆಯ ಒಂದು ನಾಯಿ ಹಾಗೂ ಎರಡು ಮರಿಗಳನ್ನು ತೆಗೆದುಕೊಂಡು ಹೋಗಿದ್ದು ಸಹ ಸಿಸಿ ಕ್ಯಾಮರದಾಲ್ಲಿ ಸೆರೆಯಾಗಿತ್ತು. ಈಗ ಪುನಃ ಮನೆಯ ಹತ್ತಿರ ಚಿರತೆ ಬರುತ್ತಿರುವುದರಿಂದ ಸುತ್ತಮುತ್ತಲಿನ ಜನತೆ ಆತಂಕಗೊಂಡಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.