ಜಿಲ್ಲೆ

ಶಾಲೆಗೆ-ಪಾಲಕರಿಗೆ ಕೀರ್ತಿ ತನ್ನಿ

ಶ್ರೀನಾಥ

ಸಿದ್ದಾಪುರ: ಇಲ್ಲಿನ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದ ವಿದ್ಯಾರ್ಥಿನಿಯರು ರಕ್ಷಾಬಂಧನ ನಿಮಿತ್ತ ಡಿಡಿಪಿಐ ಸೋಮಶೇಖರ ಗೌಡಗೆ ಶನಿವಾರ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು.

ಡಿಡಿಪಿಐ ಸೋಮಶೇಖರ ಗೌಡ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಉತ್ತಮ ಅಭ್ಯಾಸದ ಜತೆ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ವಿದ್ಯೆ ಕಲಿಸಿದ ಗುರುಗಳು ಹಾಗೂ ಪಾಲಕರಿಗೆ ಕೀರ್ತಿ ತರಬೇಕು.

ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳತ್ತ ಗಮನ ಹರಿಸಬೇಕು. ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಎಂದರು.

ಸಿಂಧನೂರು ಬಿಇಒ ಬಸವಲಿಂಗಪ್ಪ, ದೈಹಿಕ ಪರಿವೀಕ್ಷಕ ಸೋಮಲಿಂಗಪ್ಪ, ಮುಖ್ಯಶಿಕ್ಷಕ ಚಂದ್ರಶೇಖರ ಗಣವಾರಿ, ಸಿಬ್ಬಂದಿ ಇತರರಿದ್ದರು.