ಜಿಲ್ಲೆ

ಜಿಲ್ಲಾಧ್ಯಕ್ಷರಾಗಿ ಸಿದ್ದನಗೌಡರ ಅವಿರೋಧ ಆಯ್ಕೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಭೂಮಾಪನ ಇಲಾಖೆಯ ಎಸ್.ಎಫ್. ಸಿದ್ದನಗೌಡರ, ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ದೇವಿದಾಸ ಶಾಂತಿಕರ, ಖಜಾಂಚಿಯಾಗಿ ಐಟಿಐ ಕಾಲೇಜಿನ ಮಂಜುನಾಥ ಯಡಳ್ಳಿ ಅವಿರೋಧ ಆಯ್ಕೆಯಾದರು.

ಇತ್ತೀಚೆಗೆ 66 ಜಿಲ್ಲಾ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿತ್ತು. ನಿರ್ದೇಶಕರು ಮತ ಚಲಾಯಿಸಿ ಚುನಾಯಿಸುವ 3 ಸ್ಥಾನಗಳಿಗೆ ಬುಧವಾರ ಸಂಜೆ 5ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ಮೂರೂ ಸ್ಥಾನಗಳಿಗೆ ತಲಾ 1 ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಽಕಾರಿಗಳಾದ ಗಿರೀಶ ಪಾಟೀಲ ಮತ್ತು ಕೆ.ಜಿ. ಲಟ್ಟಿ ಅವಿರೋಧ ಆಯ್ಕೆ ಘೋಷಿಸಿದರು.