ಮಮದಾಪುರ: ಗೋಕಾಕ ತಾಲೂಕಿನ ಸುೇತ್ರ ತವಗ ಗ್ರಾಮದ ಶ್ರೀ ಸದ್ಗುರು ಬಾಳಯ್ಯಜ್ಜನ ಜಾತ್ರಾ ಮಹೋತ್ಸವ ಶನಿವಾರ ಸಂಭ್ರಮದಿಂದ ನೆರವೇರಿತು. ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸದ್ಗುರು ಬಾಳಯ್ಯಜ್ಜನ ಗದ್ದುಗೆಗೆ ವಿಶೇಷ ಪೂಜೆ, ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರತಿಯೊಂದಿಗೆ ವಿವಿಧ ಧಾರ್ಮಿಕ ಕಾರ್ಯ ಜರುಗಿದವು. ಕೊಳವಿ, ಹಿರೇನಂದಿ, ಚಿಕ್ಕನಂದಿ, ಎಂ.ಮಲ್ಲಾಪುರ ಸೇರಿ ವಿವಿಧೆಡೆಯಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ಭಕ್ತಿಸೇವೆ ಸಲ್ಲಿಸಿದರು. ಬಳಿಕ ವಿವಿಧ ಭಜನಾ ಮಂಡಳಿ ಭಜನಾ ಸೇವೆ ಸಲ್ಲಿಸಿದವು. ಅನ್ನದಾಸೋಹ ಕಾರ್ಯಕ್ರಮಕ್ಕೆ ಶ್ರೀಗಳು ಚಾಲನೆ ನೀಡಿದರು. ಪಂಚಮ ಪೀಠಾಧಿ-ಕಾರಿ ಬ್ರಹ್ಮಶ್ರೀ ಸಿದ್ಧ್ದಲಿಂಗಯ್ಯ ಸ್ವಾಮೀಜಿ ಅವರಿಗೆ ಬೆಣಚಿನಮರಡಿ(ಕೊ) ಗ್ರಾಮದ ಭಕ್ತರಾದ ಶಿವಾನಂದ ಸಂಗಣ್ಣವರ ಪರಿವಾರದಿಂದ ನಾಣ್ಯಗಳ ತುಲಾಭಾರ ಸೇವೆ ಸಲ್ಲಿಸಿದರು. ಕನಸಗೇರಿ ಗ್ರಾಮದ ಕಾಡಪ್ಪ ಮಲಕನವರ, ಮಹಾದೇವ ಗಡ್ಡಿಹುಳಿ ಅವರು ಶ್ರೀಗಳಿಗೆ ಕಲ್ಲು ಸಕ್ಕರೆ ತುಲಾಭಾರ ನೆರವೇರಿಸಿದರು. ಶ್ರೀಗಳಿಗೆ ರುದ್ರಾ ಕಿರೀಟ ಧಾರಣೆ ಮಾಡಲಾಯಿತು. ಮಾಹಾಲಿಂಗ ತೆಳಗೇರ, ಅಣ್ಣಪ್ಪ ಮಲಕನ್ನವರ, ಗೋಪಾಲ ಬೊಮ್ರಿ, ಬಸನಪ್ಪ ಪಾಟೀಲ, ನಿಜಪ್ಪ ಅಂಗಡಿ, ಕೃಷ್ಣ ಹಂಜಿ, ಮುತ್ತೆಪ್ಪ ಭೂತಪ್ಪಗೋಳ, ಮಲ್ಲಗೌಡ ಪಾಟೀಲ ಇತರರಿದ್ದರು.