ವಿಜಯವಾಣಿ ಸುದ್ದಿಜಾಲ ಪಾವಗಡ
ಮಧುಗಿರಿ ತಾಲೂಕಿನ ಚಿನ್ನೇನಹಳ್ಳಿಯ ದೇವಸ್ಥಾನದ ಜಾತ್ರೆಯ ವೇಳೆ ಕಲುಷಿತ ನೀರು ಸೇವಿಸಿ ಮಗು ಸೇರಿ ಆರು ಮಂದಿ ಮೃತಪಟ್ಟು 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಟನೆ ಪಾವಗಡ ತಾಲೂಕಿನಲ್ಲಿ ಬೆಳಕಿಗೆ ಬಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ತಾಲೂಕಿನ ನಾಗೇನಹಳ್ಳಿ ತಾಂಡ ಮತ್ತು ಶ್ರೀರಂಗಪುರ ತಾಂಡದ ಗ್ರಾಮಸ್ಥರು ಮದುವೆ ಮನೆಯಲ್ಲಿ ಊಟ ಸೇವಿಸಿ ಕಳೆದ 4 ದಿನಗಳಿಂದ 20ಕ್ಕೂ ಹೆಚ್ಚು ಗ್ರಾಮಸ್ಥರು ವಾಂತಿಭೇದಿಯಿಂದ ಬಳಲಿ ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮದಲ್ಲಿ ಆತಂಕ ಮನೆಮಾಡಿದೆ.
ಪ್ರಕರಣ ವಿವರ: ನಾಗೇನಹಳ್ಳಿ ಮತ್ತು ಶ್ರೀರಂಗಪುರ ತಾಂಡಗಳಲ್ಲಿ ಬುಧವಾರ ಮತ್ತು ಗುರುವಾರ 2 ದಿನ ಮದುವೆ ಕಾರ್ಯ ನಡೆದಿದ್ದು, ಮದುವೆಯ ಎರಡು ದಿನದಲ್ಲಿ ಯಾವುದೇ ವಾಂತಿ ಭೇದಿ ಕಾಣಿಸಿಕೊಂಡಿಲ್ಲ. ಶುಕ್ರವಾರ ಇದ್ದಕ್ಕಿದ್ದಂತೆ ನಾಗೇನಹಳ್ಳಿಯಲ್ಲಿ ಕೆಲವರಿಗೆ ಸಾಮೂಹಿಕವಾಗಿ ವಾಂತಿಭೇದಿ ಕಾಣಿಸಿಕೊಂಡಿದೆ. ಕೆಲವರು ಸಮೀಪದಲ್ಲೆ ಇದ್ದ ತಿರುಮಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದರೆ, ಇನ್ನು ಕೆಲವರು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ, ಹಿಂದೂಪುರ ಹಾಗೂ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ರವಾನಿಸಿದ ರಾಮೀಬಾಯಿ(70) ಭಾನುವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ ವಾಂತಿಭೇದಿಗೆ ಕಾರಣ ತಿಳಿಯದೇ ಗ್ರಾಮಸ್ಥರು ಚಿಂತಾಜನಕರಾಗಿದ್ದಾರೆ. ಅಧಿಕಾರಿಗಳು ಭೇಟಿ ನೀಡಿದರೂ ಯಾವ ಕಾರಣಕ್ಕೆ ಆಗುತ್ತಿದೆ ಎಂಬ ಮಾಹಿತಿ ನೀಡದ ಕಾರಣ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ವಿಷಯ ತಿಳಿದ ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ವರದರಾಜು, ತಾಪಂ ಇಒ ಜಾನಕಿರಾಮ್, ತಾಲೂಕು ಆರೋಗ್ಯಾಧಿಕಾರಿ ಡಾ.ಕಿರಣ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಸುರೇಶ್ ಸೇರಿದಂತೆ ಅವರು ನಾಗೇನಹಳ್ಳಿ ತಾಂಡ ಗ್ರಾಮಕ್ಕೆ ಭೇಟಿ ಮಾಡಿ ಗ್ರಾಮದಲ್ಲಿ ಮಾಹಿತಿ ಸಂಗ್ರಹಿಸಿ ಜನರ ಯೋಗ ೇಮ ವಿಚಾರಿಸಿ ವಾಂತಿಭೇದಿಗೆ ಕಾರಣವನ್ನು ಕಲೆ ಹಾಕಲು ಪರಿಶೀಲನೆ ನಡೆಸಿ, ಧೃತಿಗೆಡದಂತೆ ಗ್ರಾಮಸ್ಥರಿಗೆ ಸ್ಥೆರ್ಯ ತುಂಬಿದ್ದಾರೆ.
ವಾಂತಿಭೇದಿಯಿಂದ ತಿರುಮಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆಂದು ಹೋಗಿದ್ದೆವು. ಸರಿಯಾದ ಚಿಕಿತ್ಸೆ ನೀಡದ ಕಾರಣ, ಹಿಂದುಪುರಕ್ಕೆ ಬಂದು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡು ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದೇವೆ.ಅಂಜೇನಾಯ್ಕ ನಾಗೇನಹಳ್ಳಿ ತಾಂಡ ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ವಾಂತಿಭೇದಿಗೆ ಚಿಕಿತ್ಸೆ ಪಡೆಯುತ್ತಿದ್ದು, ಯಾವ ಕಾರಣಕ್ಕೆ ವಾಂತಿಭೇದಿ ಆಗುತ್ತಿದೆಯೋ ಗೊತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸಮಯಕ್ಕೆ ವೈದ್ಯರಿಲ್ಲದ ಕಾರಣ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಹರಿನಾಯ್ಕ ನಾಗೇನಹಳ್ಳಿ ಮದುವೆ ಮನೆಯಲ್ಲಿ ಊಟ ಮಾಡಿದ ಕಾರಣ ಫುಡ್ಪಾಯ್ಸನ್ ಆಗಿ ವಾಂತಿಭೇದಿಯಾಗಿದೆ. ಸ್ವಚ್ಛತೆ ಮತ್ತು ಕುಡಿಯುವ ನೀರಿನ ಸಮಸ್ಯೆಯಿಂದಲ್ಲ. ಚರಂಡಿ ಹಾಗೂ ಸ್ವಚ್ಛತೆ ಮಾಡಲಾಗಿದೆ. ಸುದರ್ಶನ್ ಪಿಡಿಒ ರ್ಯಾಪ್ಟೆ ಗ್ರಾಪಂ.