ಜಿಲ್ಲೆ

ವಿಷಕಾರಿ ಹಾವು ಕಡಿತಕ್ಕೊಳಗಾಗಿ ಅಸ್ವಸ್ಥ

ವೀರೇಶ ಸೌದ್ರಿ

ಭಟ್ಕಳ: ಶೇಂಗಾ ಗದ್ದೆಯಲ್ಲಿ ಔಷಧ ಸಿಂಪಡಿಸುವಾಗ ವಿಷಕಾರಿ ಹಾವು ಕಚ್ಚಿದ ಪರಿಣಾಮ ರೈತ ಅಸ್ವಸ್ಥಗೊಂಡ ಘಟನೆ ತಾಲೂಕಿನ ಮುರ್ಡೇಶ್ವರ ಬೆದ್ರಮನೆಯಲ್ಲಿ ನಡೆದಿದೆ.

ಸ್ಥಳೀಯ ರವಿ ಮಂಜುನಾಥ ನಾಯ್ಕ (34) ಹಾವು ಕಡಿತಕ್ಕೊಳಗಾದವ. ಇವರು ಭಾನುವಾರ ಬೆಳಗ್ಗೆ ಶೇಂಗಾ ಗದ್ದೆಯಲ್ಲಿ ಔಷಧ ಸಿಂಪಡಿಸುವಾಗ ಹಾವೊಂದು ಕಚ್ಚಿದೆ.

ತಕ್ಷಣ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರಿಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದೆ.