ಜಿಲ್ಲೆ

ಶ್ಯಾಂಡಿಲ್ಯಾಶ್ರಮದಲ್ಲಿ ಶ್ರಾವಣ ಉತ್ಸವ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನಾಗಶೆಟ್ಟಿಕೊಪ್ಪದ ಸದ್ಗುರು ಶ್ರೀ ಶ್ಯಾಂಡಿಲ್ಯಾಶ್ರಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಚಾಮರಸ ಕವಿ ವಿರಚಿತ ಪ್ರಭುಲಿಂಗಲೀಲೆ ವಿಷಯವಾಗಿ ಸದ್ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ (ಧ್ವನಿಮುದ್ರಿತ) ಪ್ರವಚನ ಕಾರ್ಯಕ್ರಮವನ್ನು ಜುಲೈ 25ರಿಂದ ನಿತ್ಯ ಸಂಜೆ 6ಕ್ಕೆ ಒಂದು ತಿಂಗಳ ಪರ್ಯಂತ ಏರ್ಪಡಿಸಲಾಗಿದೆ.

ಆಗಸ್ಟ್ 3ರಿಂದ 9ರ ವರೆಗೆ ಸಂಜೆ 5ಕ್ಕೆ ಶ್ರೀ ಲಲಿತಾ ತ್ರಿಶತಿ ಕುಂಕುಮಾರ್ಚನೆ ನಡೆಯಲಿದೆ. ಆ. 15ರಂದು ರಾತ್ರಿ 10ಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಲಿವೆ.

ಶ್ಯಾಂಡಿಲ್ಯಾಶ್ರಮ ನ್ಯಾಸ ಮಂಡಳ, ಸದ್ಧರ್ಮ ಜ್ಞಾನ ಪ್ರಚಾರಕ ಮಂಡಳ, ಶ್ರೀ ಬಗಳಾಂಬ ಮಹಿಳಾ ಮಂಡಳ ಮುಂತಾದ ಸಂಘಟನೆಗಳ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.