ಜಿಲ್ಲೆ

ವೀರಮಂಗಲದಲ್ಲಿ ಷಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ

Avinash R

ಪುತ್ತೂರು ಗ್ರಾಮಾಂತರ: ವೀರಮಂಗಲದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸವಣೂರು ವಲಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ ಷಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟ ವೀರಮಂಗಲದ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ನರಿಮೊಗರು ಗ್ರಾ.ಪಂ.ಸದಸ್ಯೆ ಪದ್ಮಾವತಿ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ಅನುಪಮ ಅಧ್ಯಕ್ಷತೆ ವಹಿಸಿದ್ದರು. ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಪರಮೇಶ್ವರಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗೋಪಾಲಕೃಷ್ಣ, ಹಿರಿಯ ವಿದ್ಯಾರ್ಥಿ ಹರ್ಷ ಗುತ್ತು, ಎಸ್‌ಡಿಎಂಸಿ ಉಪಾಧ್ಯಕ್ಷ ರಝಾಕ್, ಸದಸ್ಯರಾದ ದಿನೇಶ್ ಶೆಟ್ಟಿ, ಸುರೇಶ್ ಗಂಡಿ, ಸಮೀರ್, ಹರೀಶ್, ಆನಂದಗೌಡ, ರತ್ನಾವತಿ, ಚಿತ್ರಾ, ಭವ್ಯಾ, ಶಾಂಭಲತಾ, ರಾಜೇಶ್ವರಿ, ಅಡುಗೆ ಸಿಬ್ಬಂದಿ ಪಾರ್ವತಿ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕರಾದ ಮೋನಪ್ಪ ಪಟ್ಟೆ, ನವೀನ್ ರೈ ಕೆಯ್ಯೂರು, ಬಾಲಕೃಷ್ಣ ಕೆ., ಕುಂಬ್ರ ಕೆಪಿಎಸ್‌ನ ಕೃಷ್ಣ ಪ್ರಸಾದ್, ನರಿಮೊಗರು ಸಾಂದೀಪಿನಿ ವಿದ್ಯಾಸಂಸ್ಥೆಯ ಮಂಜುನಾಥ್, ವನಿತಾ ಮುಂಡೂರು, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವನಿತಾ, ಕಾಣಿಯೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಲಕ್ಷ್ಮೀ ಕೆ.ಟಿ., ಸುಲೋಚನ ಮಂಜುನಾಥ ನಗರ, ಸಿದ್ದಲಿಂಗಮ್ಮ ಭಕ್ತಕೋಡಿ, ಶ್ರೀಲತಾ ನರಿಮೊಗರು, ನರಿಮೊಗರು ವಿದ್ಯಾಮಂದಿರದ ರಾಧಾಕೃಷ್ಣ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಜಯಚಂದ್ರ ತೀರ್ಪುಗಾರರಾಗಿ ಪಂದ್ಯಾಟವನ್ನು ನಡೆಸಿಕೊಟ್ಟರು. ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸ್ವಾಗತಿಸಿ, ಶಿಕ್ಷಕರಾದ ಶೋಭಾ, ಕವಿತಾ, ಸೌಮ್ಯ, ಸವಿತಾ, ಸಂಚನ, ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ ಹಾಗೂ ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಸಹಕರಿಸಿದರು.

ಫಲಿತಾಂಶ

ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ವೀರಮಂಗಲ ಶಾಲೆ ಪ್ರಥಮ, ಶಾಂತಿಗೋಡು ಶಾಲೆ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ನರಿಮೊಗರಿನ ಸರಸ್ವತಿ ವಿದ್ಯಾಲಯ ಪ್ರಥಮ ಮತ್ತು ಕೆಯ್ಯೂರು ಕೆಪಿಎಸ್ ದ್ವಿತೀಯ , ಪ್ರೌಢಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆ ಪ್ರಥಮ, ಭಕ್ತಕ್ಕೋಡಿಯ ಎಸ್‌ಜಿಎಂ ಪ್ರೌಢ ಶಾಲೆ ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಭಕ್ತಕ್ಕೋಡಿಯ ಎಸ್‌ಜಿಎಂ ಪ್ರೌಢ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.