ಮಾನ್ವಿಯಲ್ಲಿ ಜಯ ಕರವೇ ತಾಲೂಕು ಘಟಕ ಸೋಮವಾರ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಮನವಿ ಸಲ್ಲಿಸಿತು. ವೇದಿಕೆ ತಾಲೂಕು ಅಧ್ಯಕ್ಷ ವಿಜಯಕುಮಾರ ನಾಯಕ, ಬಸವರಾಜ ಮೈಲಾರಿ, ಗುರುರಾಜ ಕುಲಕರ್ಣಿ ಇತರರಿದ್ದರು. 
ಜಿಲ್ಲೆ

ನಕಲಿ ಕ್ಲಿನಿಕ್‌ಗಳ ಬಂದ್ ಮಾಡಿಸಿ

ನರೇಶ್ ಕುಮಾರ್

ಮಾನ್ವಿ: ಮಾನ್ವಿ, ಸಿರವಾರ ತಾಲೂಕಿನ ವಿವಿಧೆಡೆ ತಲೆಎತ್ತಿರುವ ನಕಲಿ ಕ್ಲಿನಿಕ್‌ಗಳನ್ನು ಬಂದ್ ಮಾಡಿಸಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಪಟ್ಟಣದ ಬಸವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

ವೇದಿಕೆ ತಾಲೂಕು ಅಧ್ಯಕ್ಷ ವಿಜಯಕುಮಾರ ನಾಯಕ ಮಾತನಾಡಿ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯಿಂದ ಯಾವುದೇ ಪರವಾನಗಿ ಪಡೆಯದೇ ಅನಧಿಕೃತವಾಗಿ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದೆ. ಅಲ್ಲದೆ ಆಸ್ಪತ್ರೆಗೆ ಬರುವ ಬಡಜನರಿಗೆ ಅತಿಯಾದ ಡೋಸ್ ನೀಡುವ ಮೂಲಕ ಅವರ ಆರೋಗ್ಯದೊಂದಿಗೆ ನಕಲಿ ವೈದ್ಯರು ಚೆಲ್ಲಾಟ ಆಡುತ್ತಿದ್ದಾರೆ.

ಈ ಕುರಿತು ಟಿಎಚ್‌ಒಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನಕಲಿ ಕ್ಲಿನಿಕ್‌ಗಳನ್ನು ಬಂದ್ ಮಾಡಿಸುವುದರ ಜತೆಗೆ ಟಿಎಚ್‌ಒ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಬಳಿಕ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹೀದ್‌ಗೆ ಮನವಿ ಸಲ್ಲಿಸಿದರು.

ನಗರ ಘಟಕ ಅಧ್ಯಕ್ಷ ಶೇಖ್ ಮುಸ್ತಫಾ, ಪದಾಧಿಕಾರಿಗಳಾದ ದೊಡ್ಡಪ್ಪ ಹೂಗಾರ, ಬಸವರಾಜ ಮೈಲಾರಿ, ಗುರುರಾಜ ಕುಲಕರ್ಣಿ, ಗರೀಬ್ ಪಾಷಾ, ಮಲ್ಲನಗೌಡ ಬೈಲಮರ್ಚೆಡ್, ಜಲಾಲ್ ಶಾಸ್ತ್ರೀಕ್ಯಾಂಪ್, ರೇಣುಕರಾಜ್, ಯಂಕೋಬ ಯಾದವ್ ಇತರರಿದ್ದರು.