ಔರಾದ್ ತಾಲೂಕಿನ ಜೊನ್ನೆಕೇರಿಯ ಶ್ರೀ ಗುರು ಪತ್ರಿಸ್ವಾಮಿ ಸಂಸ್ಥಾನ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವನಸಿರಿ ಕಾರ್ಯಕ್ರಮದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ೭೪ನೇ ಜನ್ಮದಿನಕ್ಕೆ ಸಾಹಿತಿ, ಚಿಂತಕ ಪ್ರೊ.ಸಿದ್ದು ಯಾಪಲಪರವಿ ಚಾಲನೆ ನೀಡಿದರು. ಜಗನ್ನಾಥ ಮೂಲಗೆ, ಮಲ್ಲಿಕಾರ್ಜುನ ಟಂಕಸಾಲೆ, ಚಂದ್ರಕಾಂತ ನಿರ್ಮಳೆ, ಗುರುರಾಜ ಯಾದವ, ರಿಯಾಜ್ ಪಾಶಾ, ಮಹಾನಂದಾ ಎಂಡೆ, ಭಾರತಿ, ವಿನಯ ಮಾಳಗೆ, ಬಸವರಾಜ ಬಿರಾದಾರ ಇತರರಿದ್ದರು. 
ಜಿಲ್ಲೆ

ಡಾ.ಬಸವಲಿಂಗ ಪಟ್ಟದ್ದೇವರ ಕೊಡುಗೆ ಅಪಾರ

ರಾಜು ಯಮಕನಮರಡಿ

ಔರಾದ್: ಗಡಿ ಭಾಗದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಲ್ಲಿಸುತ್ತಿರುವ ಸಮಾಜ ಸೇವೆ ಮಾದರಿ ಆಗಿದ್ದು, ತಮ್ಮ ಜೀವನವನ್ನು ಬಸವತತ್ವ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗೆ ಮೀಸಲಿಟ್ಟಿದ್ದಾರೆ. ಪಟ್ಟದ್ದೇವರು ಬಸವಣ್ಣನವರ ಆದರ್ಶ, ಡಾ.ಚನ್ನಬಸವ ಪಟ್ಟದ್ದೇವರು ಹಾಕಿದ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಸಾಹಿತಿ, ಚಿಂತಕ ಪ್ರೊ.ಸಿದ್ದು ಯಾಪಲಪರವಿ ಹೇಳಿದರು.

ಜೊನ್ನೆಕೇರಿಯ ಶ್ರೀ ಗುರು ಪತ್ರಿಸ್ವಾಮಿ ಸಂಸ್ಥಾನ ಮಠದಲ್ಲಿ ತಾಲೂಕು ಬಸವ ಬಾಂಧವ್ಯ ಬಳಗ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವನಸಿರಿ ಕಾರ್ಯಕ್ರಮದಲ್ಲಿ ನಾಡೋಜ ಶ್ರೀಡಾ.ಬಸವಲಿಂಗ ಪಟ್ಟದ್ದೇವರ ೭೪ನೇ ಜನ್ಮದಿನಕ್ಕೆ ಚಾಲನೆ ನೀಡಿ ಮಾತನಾಡಿದದ ಅವರು, ಕಲ್ಯಾಣ ನಾಡಿಗೆ ಶರಣರು ನೀಡಿದ ಕೊಡುಗೆ ಅಮೋಘವಾಗಿದೆ. ಅವರು ನೀಡಿದ ವಚನಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕು. ತ್ರಿವಿಧ ದಾಸೋಹದಲ್ಲಿ ಶ್ರೀಮಠದ ಕಾರ್ಯ ಅನೋನ್ಯವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಲಿಂಗೈಕ್ಯರಾದ ಮಹಾ ಚೇತನ, ಶತಾಯುಷಿ ಪೂಜ್ಯ ವಿ.ಸಿದ್ದರಾಮಣ್ಣ ಮತ್ತು ವೀರಮರಣ ಹೊಂದಿದ ಅನಿಲï ನವಾಡೆ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.

ಬಸವ ಬಾಂಧವ್ಯ ಬಳಗದ ಸದಸ್ಯರಿಗೆ ವಿವಿಧ ರೀತಿಯ ಆಟೋಟಗಳು, ನೃತ್ಯ ಸೇರಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನವಾಗಿ ಪುಸ್ತಕಗಳನ್ನು ನೀಡಲಾಯಿತು.

ಪ್ರಮುಖರಾದ ಬಿ.ಎಂ.ಅಮರವಾಡಿ, ಗುರುನಾಥ ದೇಶಮುಖ, ಗಜಾನನ ಮಳ್ಳಾ, ಯೋಗೇಶ್ವರಿ, ಮಹಾದೇವ ಮಡಿವಾಲ, ಶಿವಾನಂದ ಸ್ವಾಮಿ, ಪ್ರವೀಣಸ್ವಾಮಿ, ಬಾಲರಾಜ ಎಂಡೆ, ಜಗನ್ನಾಥ ಬಿರಾದಾರ, ರಾಜಕುಮಾರ ಹಲಮಂಡಗೆ, ಸಿದ್ದೇಶ ಸ್ವಾಮಿ, ಮಹೇಶ ಮಜಗೆ, ಸಂದೀಪ ಪಾಟೀಲ್, ವೀರೇಶ ಅಲ್ಮಾಜೆ, ಬಾಲಾಜಿ ಕುಂಬಾರ, ತುಕಾರಾಮ ನಾಗೂರೆ, ಸಂಜುಕುಮಾರ ಬಿರಾದಾರ, ಮಹದೇವ ಘುಳೆ, ರಾಜಕುಮಾರ ನಾಯ್ಕ ಇತರರಿದ್ದರು.

ಬಾಲಾಜಿ ಅಮರವಾಡಿ ಪ್ರಾಸ್ತಾವಿಕ ಮಾತನಾಡಿದರು. ಮಹಾನಂದಾ ಎಂಡೆ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ನಿರೂಪಣೆ ಮಾಡಿದರು.