ಬಾಗಲಕೋಟೆ: ಎಸ್ಸಿ,ಎಸ್ಟಿ ಸಮಾಜವು ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ 4 ದಶಕಗಳಿಂದ ಹೋರಾಟ ಮಾಡಿದರು ಯಾವ ಸರ್ಕಾರಗಳು ಮಾಡಲಿಲ್ಲ. ಡಬಲ್ ಗುಂಡಿಗೆ ಇರುವ ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ಹೆಚ್ಚಿಸುವ ಮೂಲಕ ಹಿಂದುಳಿದ ಸಮುದಾಯಕ್ಕೆ ಬಿಜೆಪಿ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮಲು ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿ ಸಭಾಭವನದಲ್ಲಿ ಮಂಗಳವಾರ ಬಳ್ಳಾರಿಯಲ್ಲಿ ನಡೆಯುವ ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.
2018 ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕಿತ್ತು. ಆದರೇ ವಾಮ ಮಾರ್ಗದಿಂದ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಒಂದು ವರ್ಷದ ನಂತರ ಬಿಜೆಪಿ ಅಧಿಕಾರಕ್ಕೆ ಬಂದಿತಯ. ಕೋವಿಡ್, ಪ್ರವಾಹ ಸಂಕಷ್ಟ ಸಂದರ್ಭವನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಜಾತಿ,ಮತ, ಪಂಥ ಇಲ್ಲದೆ ಸೇವೆ ಮಾಡಿದೆ. ಇದೀಗ ಮೀಸಲಾತಿ ಹೆಚ್ಚಿಸುವ ಮೂಲಕ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಿದೆ ಎಂದರು.
ನಮ್ಮ ಸರ್ಕಾರ ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಪ್ರತ್ಯೇಕ ಸಚಿವಾಲಯ ಸ್ಥಾಪಿಸಿತು. ಮೀಸಲಾತಿ ಹೆಚ್ಚಳ ಮಾಡಿತು. ಗಂಡಸ್ತನ, ದೈರ್ಯ ಇದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ನೀಡಿದ್ದಾರೆ. 60 ವರ್ಷದ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದರು ಇಂತಹ ಧೈರ್ಯ ಮಾಡಿಲ್ಲ. ಬೊಮ್ಮಾಯಿ ಡಬಲ್ ಗುಂಡಿಗೆ ಮನುಷ್ಯ ಅಂತ ಹಾಡಿ ಹೊಗಳಿದರು.
ಶ್ರೀರಾಮಲು ಮಾತು ಕೊಟ್ಟರೆ ತಪ್ಪ: ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಅಂತ ಹೇಳಿದ್ದೆ. ಆದರೇ 3 ವರ್ಷ ಕಳೆದರು ಆಗಲಿಲ್ಲ. ಅಷ್ಟರಲ್ಲಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾಂದಪುರಿ ಸ್ವಾಮೀಜಿ ಹೋರಾಟ ಕೈಗೊಂಡರು. ಖಂಡಿತ ಮಾಡುತ್ತೇವೆ ಹಿಂಪಡೆಯಿರೀ ಅಂತ ಮನವಿ ಮಾಡಿ ಹೇಳಿದೆ. ಆದರು ಕೇಳಲಿಲ್ಲ. 260 ಕುಳಿತರು. ಕುಳಿತುಕೊಳ್ಳಿ ಏನು ಮಾಡಕ್ಕೆ ಆಗಲ್ಲ ಅಂತ ಹೇಳಿದೆ. ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಎದುರು ಪ್ರಸ್ತಾಪ ಮಾಡಿದಾಗ ಗ್ರೀನ ಸಿಗ್ನಲ್ ನೀಡಿದರು. ಮಾತು ಕೊಟ್ಟಂತೆ ಇದೀಗ ಮೀಸಲಾತಿ ಹೆಚ್ಚಳವಾಗಿದೆ ಅಂತ ಮೀಸಲಾತಿ ಹೆಚ್ಚಳಕ್ಕೆ ಶ್ರೀಗಳಿಗ್ಗಿಂತ ತಾವು ಎನ್ನು ಕ್ರೇಡಿಟ್ ತೆಗೆದುಕೊಳ್ಳುವ ಪೈಪೋಟಿ ಒಡ್ಡಿದರು ಶ್ರೀರಾಮಲು.
ಬಾದಾಮಿ- ಜಮಖಂಡಿ ಗೆಲ್ಲಬೇಕು: ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ಅಲ್ಪಮತಗಳಿಂದ ಸೋಲು ಉಂಟಾಯಿತು. ನನ್ನಂತ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷವು ಎರಡು ಕಡೆ ಟಿಕೆಟ್ ನೀಡಿತು. ಸಾಕಷ್ಟು ಪ್ರಯತ್ನ ನಡುವೆ ಜಮಖಂಡಿ, ಬಾದಾಮಿಯಲ್ಲಿ ಸೋಲು ಕಂಡೆವು. ಮುಂದಿನ ಸಾರಿ ಜಿಲ್ಲೆಯ ಏಳು ಮತಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಿಜೆಪಿ ಬರಬೇಕು ಎಂದರು.
ಬಳ್ಳಾರಿಯಲ್ಲಿ ನಡೆಯುವ ಬಿಜೆಪಿ ಎಸ್ಟಿ ಮೋರ್ಚಾ ಸಮಾವೇಶಕ್ಕೆ ಬಾಗಲಕೋಟೆ, ವಿಜಯಪುರ ಜಿಲ್ಲೆಯ ಕಾರ್ಯಕರ್ತರು ಆಗಮಿಸಬೇಕು ಎಂದು ಆಹ್ವಾನ ನೀಡಿದ ಶ್ರೀರಾಮಲು ಅವರಿಗೆ ಬೆಳ್ಳಿ ಖಡ್ಗ, ಬೃಹತ್ ಹೂವಿನ ಹಾರ ಹಾಕಿ ಕಾರ್ಯಕರ್ತರು ಸನ್ಮಾನಿಸಿದರು. ಶಾಸಕ ವೀರಣ್ಣ ಚರಂತಿಮಠ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕ ಶ್ರೀರಾಮಲು, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ರಾಜು ನಾಯ್ಕರ, ಬಸವರಾಜ ಯಂಕಂಚಿ, ಶ್ರೀಶೈಲ ಬಿರಾದಾರ, ಯಲ್ಲಪ್ಪ ಕಲಾದಗಿ, ಶರಣಮ್ಮ ಕಾಮರೆಡ್ಡಿ , ವಿವೇಕಾನಂದ ಡಬ್ಬಿ, ಚಂದ್ರಶೇಖರ ಕವಟಗಿ ಇತರರು ಇದ್ದರು.
ಸಿದ್ದರಾಮಯ್ಯ ಉಂಡ ಮನೆ ಜಂತಿ ಎನಿಸುವವ
ತಮ್ಮ ಭಾಷಣದೂದ್ದಕ್ಕೂ ಸಚಿವ ಶ್ರೀರಾಮಲು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು. ನೀನು ಒಳ್ಳೆಯವನಲ್ಲ ಅಂತ ಚಾಮುಂಡಿತಾಯಿ ತಿರಸ್ಕಾರ ಮಾಡಿದಳು. ಬಾದಾಮಿಗೆ ಬಂದ ಬನಶಂಕರಿ ಕೈ ಹಿಡಿದಳು. ಇದೀಗ ಸೋಲಿನ ಭೀತಿಯಿಂದ ಬೇರೆ ಜಿಲ್ಲೆಗೆ ಪಲಯಾನ ಮಾಡುತ್ತಿದ್ದಾರೆ. ಈ ಹಿಂದೆ ಜಿಡಿಎಸ್ ನಲ್ಲಿ ಇದ್ದಾಗ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ. ಪರಮೇಶ್ವರ, ಖರ್ಗೆಗೆ ಮೋಸ ಮಾಡಿದ. ಬಾದಾಮಿಯಲ್ಲಿ ಗೆಲ್ಲಿಸಲು ಗಂಟೆ ಗಟ್ಟಲೆ ಓಡಾಡಿದ ಬಾಗಲಕೋಟೆಯ ಎಸ್.ಆರ್.ಪಾಟೀಲ, ಪಾಪ ಚಿಮ್ಮನಕಟ್ಟಿ ಕಥೆ ಮುಗಿಸಿದ. 2018 ಚುನಾವಣೆ ಸಂದರ್ಭದಲ್ಲಿ ಹೊಟೇಲ್ ನಲ್ಲಿ ಎಸ್.ಆರ್. ಪಾಟೀಲ ಸಿಕ್ಕಿದ್ದರು. ಸಿದ್ದರಾಮಯ್ಯ ಮುಂದೆ ನಿಮ್ಮ ನಡೆಯುದಿಲ್ಲ ಅಂದರು ನನಗೆ. ಆವಾಗ ನಾನು ನನದು ಬಿಡಿ ನಿಮ್ಮದು ನೋಡಿ ಅಂದೆ. ಮುಂದೆ ಬೆಂಗಳೂರಿನಲ್ಲಿ ಸಿಕ್ಕರು. ಆಗ ಎಸ್.ಆರ್.ಪಾಟೀಲ ಶ್ರೀರಾಮಲು ನೀವು ಹೇಳಿದ್ದು ಸತ್ಯ ಆಯ್ತು ಅಂದ್ರು. ಅದಕ್ಕೆ ಹೇಳಿದೆ ಸಿದ್ದರಾಮಯ್ಯ ಯಾರನ್ನು ಬೀಡಲ್ಲ. ಉಂಡ ಮನಿ ಜಂತಿ ಎನಿಸಾವ ಅಂತ ಶ್ರೀರಾಮಲು ಕುಟುಕಿದರು.
ಡಿಕೆಶಿ- ಸಿದ್ದರಾಮಯ್ಯ ನಡುವೇ ಬೈಟು ಕದನ ನಡೆಯುತ್ತಿದೆ. ಟಿಕೆಟ್ ಹಂಚಿಕೆಯಲ್ಲಿ ಕ್ಷೇತ್ರ ಹಂಚಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ರೀತಿ ರಾಜಕಾರಣ ನಡೆಯಲ್ಲ ಎಂದು ಟೀಕೆ ಮಾಡಿದ ಅವರು, ಸಿದ್ದರಾಮಯ್ಯ ಎಲ್ಲಿ ನೋಡ್ತಾರ ಗೊತ್ತಿಲ್ಲ. ವರುಣ ಕ್ಷೇತ್ರದಲ್ಲಿ ಯಾರಣ್ಣ ನಿಲ್ಲಿಸಬೇಕು ಅಂತ ನಮ್ಮ ರಾಜಹುಲಿ ಯಡಿಯೂರಪ್ಪ ನಿರ್ಧಾರ ಮಾಡುತ್ತಾರೆ ಎಂದರು.
ಕೋಟ್ ..
ಯಾವ ಪಕ್ಷದ ಸರ್ಕಾರ ಮಾಡದ ಕೆಲಸ ನಮ್ಮ ಸರ್ಕಾರ ಮಾಡಿದೆ. ಜವಾಬ್ದಾರಿಯು ಹೆಚ್ಚಿಸಿದೆ. ನ.20 ರಂದು ಬಳ್ಳಾರಿಯಲ್ಲಿ ನಡೆಯುವ ಎಸ್ಟಿ ಮೋರ್ಚಾ ಸಮಾವೇಶದಲ್ಲಿ ಎಲ್ಲರು ಭಾಗವಹಿಸಬೇಕು.
ವೀರಣ್ಣ ಚರಂತಿಮಠ ಶಾಸಕ ಬಾಗಲಕೋಟೆ
**
ಕೋಟ
ಸಾಮಾಜಿಕ ನ್ಯಾಯ, ಸರ್ವರಿಗೂ ಸಮಬಾಳು ತತ್ವದಲ್ಲಿ ನಮ್ಮ ಸರ್ಕಾರ ನಡೆದಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ, ಇದೀಗ ಎಸ್ಪಿ, ಎಸ್ಟಿ ಅವರಿಗೆ ಮೀಸಲಾತಿ ಹೆಚ್ಚಿಳ ಮಾಡಿದೆ. ಮತದಾರರು
ಬಿಜೆಪಿ ಬೆಂಬಲಿಸಬೇಕು.
*ಪಿ.ಎಚ್.ಪೂಜಾರ ವಿ. ಸದಸ್ಯ