ಜಿಲ್ಲೆ

ಯಕ್ಷಗಾನ ಅತ್ಯಂತ ಶ್ರೇಷ್ಠ ಕಲೆ - ನಿವೃತ್ತ ಮುಖ್ಯ ಶಿಕ್ಷಕ ಅಣ್ಣಯ್ಯ ಎಂ.

Mangaluru - Hariprasad Rai


ಮಂಗಳೂರು : ಯಕ್ಷಗಾನ ಕಲೆ ಅತ್ಯಂತ ಶ್ರೇಷ್ಠ ಕಲೆ. ಮಕ್ಕಳಲ್ಲಿರುವ ಬೌದ್ಧಿಕ ವಿಕಾಸಕ್ಕೆ ಪೂರಕವಾಗಿದ್ದು, ಶರೀರ ಮತ್ತು ಮನಸ್ಸಿಗೆ ಉತ್ತಮ ವ್ಯಾಯಾಮ ನೀಡುವ ಕೌಶಲ ಯಕ್ಷಗಾನಕ್ಕೆ ಇದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅಣ್ಣಯ್ಯ ಎಂ. ಹೇಳಿದರು.
ಶ್ರೀರಾಮ ಕಲಾವೇದಿಕೆ ಕೈಕಂಬ ಇದರ ಆಶ್ರಯದಲ್ಲಿ ನಡೆದ ಮಕ್ಕಳ ಸಪ್ತದಿನ ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಯಕ್ಷಕಲಾ ಸೇವೆಯನ್ನು ಮಕ್ಕಳಲ್ಲಿರುವ ಪ್ರತಿಭೆಗಳಿಗೊಂದು ಅವಕಾಶ ಎನ್ನುವ ಶೀರ್ಷಿಕೆಯಡಿ ಪ್ರದರ್ಶಿಸುವ ಮಕ್ಕಳ ಸಪ್ತದಿನ ಯಕ್ಷೋತ್ಸವ ಸರ್ವರಿಗೆ ಮಾದರಿಯಾಗಿದೆ ಎಂದರು.
ಶ್ರೀರಾಮ ಕಲಾವೇದಿಕೆಯ ಅಧ್ಯಕ್ಷ ಎಂ. ಹರಿ ರಾವ್ ಕೈಕಂಬ, ಸರೋಜಾ ಹರಿ ರಾವ್ ಮತ್ತು ಗೀತಾ ರಾವ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಸನ್ನ ರಾವ್ ವಂದಿಸಿದರು. ಗಜಾನನ ಭಟ್ ಕಾರ್ಯಕ್ರಮ ನಿರೂಪಿಸಿದರು.