ಎನ್. ಮುನಿವೆಂಕಟೇಗೌಡ ಶ್ರೀನಿವಾಸಪುರ
ಜಿಲ್ಲೆಯಲ್ಲೇ ಅತಿ ಹೆಚ್ಚು ಮಾವು ಬೆಳೆಯುವ ಶ್ರೀನಿವಾಸಪುರ ತಾಲೂಕಿನಲ್ಲಿ ಈ ಬಾರಿ ಫಸಲಿನಲ್ಲಿ ಏರುಪೇರು ಕಂಡು ಬರುತ್ತಿರುವುದರ ಜತೆಗೆ ಹೂವಿನ ಗೊಂಚಲಿನಲ್ಲಿ ರೋಗ ಹಾಗೂ ಉಳುವಿನ ಬಾಧೆ ಕಂಡು ಬಂದಿದ್ದು, ಮಾವು ಬೆಳೆಗಾರರನ್ನು ಕಂಗಾಲಾಗಿಸಿದೆ.
ಕೋಲಾರ ಜಿಲ್ಲೆಯಲ್ಲಿ 53 ಸಾವಿರ ಹೇಕ್ಟೇರ್ ಪ್ರದೇಶದಲ್ಲಿ ವಾವು ಬೆಳೆಯಲಾಗುತ್ತದೆ. ಆ ಪೈಕಿ ಶ್ರೀನಿವಾಸಪುರ ತಾಲೂಕಿನಲ್ಲಿಯೇ ಸುವಾರು 30 ಸಾವಿರ ಹೇಕ್ಟೇರ್ ವಿಸ್ತೀರ್ಣದಲ್ಲಿ ವಾವನ್ನು ಬೆಳೆಯಲಾಗಿದೆ. ಸಾವಾನ್ಯವಾಗಿ ಡಿಸೆಂಬರ್- ಜನವರಿಯಲ್ಲಿ ಹೂವು ಬರುತ್ತದೆ. ತಡವಾದರೆ ಫೆಬ್ರವರಿ ತಿಂಗಳ ಒಂದು ಮತ್ತು ಎರಡನೇ ವಾರಗಳಲ್ಲಿ ಹೂ ಬರುವಿಕೆ ಮುಗಿಯುವುದು ವಾಡಿಕೆ. ಆದರೆ ಈ ಬಾರಿ ವಾರ್ಚ್ ತಿಂಗಳು ಮುಗಿಯುತ್ತಿದ್ದರೂ ಮರಗಳಲ್ಲಿ ವಿವಿಧ ಹಂತಗಳಲ್ಲಿ ಹೂ ಬರಲಾರಂಭಿಸಿದ್ದು, ಫಸಲಿನಲ್ಲಿ ಏರುಪೇರು ಕಂಡು ಬಂದಿದೆ. ಮರದಲ್ಲಿ ಒಂದೆಡೆ ಗೋಲಿ ಗಾತ್ರದ ಕಾಯಿ ಬೆಳೆದಿದ್ದು, ಮತ್ತೊಂದೆಡೆ ಈಗಲೂ ಹೂ ಬರುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ.
ಕಾಯಿಗಳ ಮೇಲೆ ಮಚ್ಚೆ:
ಬಂದ ಹೂವು ಆರೋಗ್ಯ ಸ್ಥಿತಿಯಲ್ಲಿಲ್ಲ. ಈಗಾಗಲೆ ಡಿಸೆಂಬರ್ ಮತ್ತು ಜನವರಿಯಲ್ಲಿ ಕಾಣಿಸಿಕೊಂಡಿರುವ ಹೂವಿನಲ್ಲಿ ಹಿಡಿ ಗಾತ್ರದ ಕಾಯಿಗಳು ಆಗಿವೆ. ಎರಡನೇ ಹಂತದ ಹೂ ಕಾಣಿಸಿಕೊಂಡಿರುವ ಮರಗಳಲ್ಲಿ ಪಿಂದೆಗಳಾಗಿ ಕಾಣಿಸಿಕೊಂಡಿವೆ. ಅವುಗಳಿಗೆ ರೋಗ ಬಾಧೆಯಿಂದ ಪಿಂದೆಗಳು(ಹೀಚು) ಉದುರಿ ನೆಲಕಚ್ಚುತ್ತಿವೆ. ಮೂರನೇ ಹಂತದಲ್ಲಿ ಕಾಣಿಸಿಕೊಂಡಿರುವ ಹೂವು ಗೊಂಚಲುಗಳು ಒಣಗುತ್ತಿದ್ದು, ಹೂ ಉದುರಿ ಪಿಂದೆ ಮತ್ತು ಕಾಯಿಗಳ ಮೇಲೆ ಬಿದ್ದು ಮಚ್ಚೆಗಳು ಕಂಡುಬರುತ್ತಿವೆ. ಇದರ ಮಧ್ಯೆ ಮರಗಳಲ್ಲಿ ಚಿಗುರು ದಟ್ಟವಾಗಿ ಬರತೊಡಗಿದೆ.
ಅಂಟುನೋಣದಿಂದ ಹೂವು ನಾಶ: ಹೂವಿನೊಂದಿಗೆ ಚಿಗುರು ಬಂದರೆ ಸರಿಯಾಗಿ ಹೀಚು ಕಟ್ಟುವುದಿಲ್ಲ. ಜತೆಗೆ ಚಿಗುರಿಗೆ ಬೀಳುವ ಅಂಟುನೋಣ ಹೂವಿನ ನಾಶಕ್ಕೆ ಕಾರಣವಾಗುತ್ತದೆ. ಜಿಗಿ ನೋಣಗಳು ಸ್ರವಿಸುವ ಅಂಟು ಹೂವಿನ ಮೇಲೆ ಸುರಿದು ಹೂ ಹಾಳಾಗುತ್ತಿದೆ. ಇದರ ನಿಯಂತ್ರಣಕ್ಕೆ ಔಷಧ ಸಿಂಪಡಣೆ ವಾಡಬೇಕಾಗುತ್ತದೆ. ಇದು ಬೆಳೆಗಾರರಿಗೆ ಹೆಚ್ಚಿನ ಹೊರೆಯಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.
ಆಲಿಕಲ್ಲು ಮಳೆಗೆ ನಷ್ಟ: ಇತ್ತೀಚೆಗೆ ತಾಲೂಕಿನಲ್ಲಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಹೊಡತಕ್ಕೆ ಸಿಕ್ಕಿ ಬಹಳಷ್ಟು ಫಸಲು ಹಾಳಾಗಿದೆ. ಮುಖ್ಯವಾಗಿ ಹೂ ಮರಗಳಿಂದ ಕೆಳಕ್ಕೆ ಬಿದ್ದು ಹಾನಿ ಸಂಭವಿಸಿದ್ದು, ಪಿಂದೆಗಳ ಮೇಲೆಯೂ ಆಲಿಕಲ್ಲು ಬಿದ್ದು ಹಾನಿಯಾಗಿದೆ. ಆ ಕಾಯಿಗಳು ಯಾವಾಗ ನೆಲಕಚ್ಚುತ್ತವೆ ಎಂಬುದು ಗೊತ್ತಿಲ್ಲ. ಆದ್ದರಿಂದ ಅವುಗಳಿಂದ ಕಾಯಿಗಳನ್ನೂ ನಿರೀಕ್ಷಿಸುವಂತಿಲ್ಲ ಎಂದು ಹೇಳುತ್ತಾರೆ ಮಾವು ಬೆಳೆಗಾರರು.
ಹವಾವಾನ ವೈಪರೀತ್ಯದಿಂದಾಗಿ ಈ ಬಾರಿ ವಾವಿನ ಫಸಲಲ್ಲಿ ಏರುಪೇರು ಕಂಡುಬಂದಿದೆ. ಈಗಾಗಲೇ ಮೂರು ಹಂತಗಳಲ್ಲಿ ಹೂ ಬಂದಿದ್ದು, ಯಾವುದನ್ನೂ ನಿರೀಕ್ಷಿಸುವಂತಿಲ್ಲ. ಒಂದೇ ಮರದಲ್ಲಿ 3 ರೀತಿಯಲ್ಲಿ ಫಸಲು ಬರುತ್ತಿರುವುದರಿಂದ ರೋಗದ ಬಾಧೆಯೂ ಕಾಡುತ್ತಿದೆ. ಹೂವನ್ನು ಕಾಪಾಡುವುದು ಸಮಸ್ಯೆಯಾಗಿದೆ. ವೆಂಕಟರೆಡ್ಡಿ, ನಿವೃತ್ತ ಮುಖ್ಯಶಿಕ್ಷಕ, ಮೀಸಗಾನಹಳ್ಳಿ ವಾರ್ಚ್ ತಿಂಗಳಲ್ಲಿ ವಾವಿನ ಮರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೂಗಳನ್ನು ನಂಬುವಂತಿಲ್ಲ, ಏಕೆಂದರೆ ಅವು ಕಾಯಿ ಕಚ್ಚುವುದಿಲ್ಲ. ಕಚ್ಚಿದರೂ ಅದು ಕೆಲ ದಿನಗಳ ನಂತರ ಉದುರಿ ಹೋಗುತ್ತದೆ. ಇದರಿಂದ ರೋಗದ ಬಾಧೆ ಕಾಣಿಸಿಕೊಳ್ಳುವುದು ಸಹಜ, ಇದನ್ನು ತಡೆಗಟ್ಟಲು ಔಷಧ ಸಿಂಪಡನೆ ವಾಡಬೇಕು. ಬೈರಾರೆಡ್ಡಿ, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಶ್ರೀನಿವಾಸಪುರ