ಜಿಲ್ಲೆ

ಅಂತಾರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಶ್ರೀನಾಥಾನ್ 2.0

Mangaluru - Hariprasad Rai


ಮಂಗಳೂರು : ವಳಚ್ಚಿಲ್‌ನ ಶ್ರೀನಿವಾಸ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಸ್‌ಎಸ್‌ಒಎಸ್‌ಸಿ ಮತ್ತು ನೆಕ್ಸಸ್-
ಎಸ್‌ಐಟಿ ಸಹಯೋಗದಲ್ಲಿ ಆಯೋಜಿಸಲಾದ ್ಲ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಶ್ರೀನಾಥಾನ್ 2.0 ಇದರ
ಉದ್ಘಾಟನೆ ಗುರುವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಸಿಎ ಎ. ರಾಘವೇಂದ್ರ ರಾವ್ ಮಾತನಾಡಿ ಅಂತಾರಾಷ್ಟ್ರೀಯ ಹ್ಯಾಕಥಾನ್‌ಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವಗಳ ಮೂಲಕ ಅಪರಿಮಿತ ಸಾಧನೆ, ಸೃಜನಶೀಲತೆ ಹಾಗೂ ಜಾಗತಿಕಮಟ್ಟದ ತಂತ್ರಜ್ಞಾನ ಪರಿಚಯಕ್ಕೆ ಪೂರಕವಾಗಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಎಥ್ನೋಟೆಕ್ ಅಕಾಡೆಮಿ ಚೇರ್ಮನ್ ಡಾ.ಕಿರಣ್ ರಾಜಣ್ಣ ಅವರು ಉದ್ಯೋಗ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಭಾರತದ ವ್ಯಾಪಕ ಉದ್ಯಮಾವಕಾಶಗಳ ಕುರಿತು ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಪ್ರೊ.ಶೈಲೇಶ್ ಶೆಟ್ಟಿ ಎಸ್. ಉಪಸ್ಥಿತರಿದ್ದರು.
ಶ್ರೀನಿವಾಸ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಶ್ರೀನಿವಾಸ ಮಯ್ಯ ಡಿ. ಸ್ವಾಗತಿಸಿ, ಡಾ.ಧೀರಜ್ ಹೆಬ್ರಿ ವಂದಿಸಿದರು. ರೇಶ್ಮಿ ಮತ್ತು ಪ್ರಜ್ವಲ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.