ಜಿಲ್ಲೆ

ಶ್ರೀನಿವಾಸ ವಿ.ವಿ.ಯ ಸಂಶೋಧನಾ ಕಾರ್ಯಗಳಿಗೆ ಇಸ್ರೋ ಬೆಂಬಲ

Mangaluru - Hariprasad Rai



ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯದ ವತಿಯಿಂದ ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಮತ್ತು ನ್ಯಾನೊ ಟೆಕ್ನಾಲಜಿ ಕುರಿತು
ಅಂತಾರಾಷ್ಟ್ರೀಯ ಸಮ್ಮೇಳನ ನಗರದ ಹೋಟೆಲ್ ಶ್ರೀನಿವಾಸದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಇಸ್ರೋ ವಿಜ್ಞಾನಿ ಡಾ.ಕೆ.ಉಮಾಮಹೇಶ್ವರನ್ ಮಾತನಾಡಿ ‘ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಶೈಕ್ಷಣಿಕ ವಿಷಯಗಳಿಗೆ ಇಸ್ರೋ ಸಂಪೂರ್ಣ ಬೆಂಬಲ ನೀಡಲಿದೆ. ಇಸ್ರೋಗೆ ಭೇಟಿ ನೀಡಲು, ಉಪಗ್ರಹ ಮತ್ತು ರಾಕೆಟ್ ತಂತ್ರಜ್ಞಾನದಲ್ಲಿ ಜ್ಞಾನ ಪಡೆಯಲು ಅವಕಾಶ ಕಲ್ಪಿಸಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಿಎ ಎ.ರಾಘವೇಂದ್ರ ರಾವ್ ಮಾತನಾಡಿ ಶ್ರೀನಿವಾಸ ವಿಶ್ವವಿದ್ಯಾಲಯವು ಸಂಶೋಧನೆಯಲ್ಲಿ ಪ್ರಮುಖ ಸಂಸ್ಥೆಯಾಗಿದೆ ಎಂದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಥಾಯ್ಲೆಂಡ್‌ನ ಕಿಂಗ್ ಮೊಂಗ್‌ಕುಟ್‌ನ ತಂತ್ರಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿ ಡಾ.ಎಸ್. ಮುರಳಿಕೃಷ್ಣ, ಶ್ರೀನಿವಾಸ ವಿಶ್ವವಿದ್ಯಾಲಯದ
ಪ್ರಭಾರ ಉಪಕುಲಪತಿ ಡಾ. ಅನಿಲ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.
ಶ್ರೀನಿವಾಸ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಅಜಯ್ ಕುಮಾರ್, ಇಂಜಿನಿಯರಿಂಗ್ ಕಾಲೇಜಿನ ಡೀನ್ ಡಾ. ಥಾಮಸ್ ಪಿಂಟೊ, ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ನವೀನ್ ಕುಮಾರ್ ಜೆ.ಆರ್ ಉಪಸ್ಥಿತರಿದ್ದರು.
ಪ್ರೊ.ಶ್ರೀನಾಥ್ ರಾವ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ.ಪ್ರವೀಣ್ ಬಿ.ಎಂ. ಸ್ವಾಗತಿಸಿ, ಪ್ರೊ. ಚೈತ್ರಾ ವಂದಿಸಿದರು. ಪ್ರೊ.ರೋಹನ್ ಕಾರ್ಯಕ್ರಮ ನಿರೂಪಿಸಿದರು.