ಜಿಲ್ಲೆ

ವೈದ್ಯಕೀಯ ವೃತ್ತಿ ಸಮಾಜದಲ್ಲಿ ಅತ್ಯಂತ ಪವಿತ್ರ : ಡಾ. ಸಿಎ. ಎ. ರಾಘವೇಂದ್ರ ರಾವ್ ಅಭಿಮತ

Mangaluru - Hariprasad Rai


ಮಂಗಳೂರು : ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್‌ನ ಎಂಬಿಬಿಎಸ್ ಹೊಸ ಬ್ಯಾಚ್‌ನ ಪುನಶ್ಚೇತನ ಕಾರ್ಯಕ್ರಮ ಸಂಸ್ಥೆಯ ಮುಕ್ಕಾ ಕ್ಯಾಂಪಸ್‌ನಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿ.ವಿ.ಯ ಕುಲಾಧಿಪತಿ ಡಾ. ಸಿಎ. ಎ. ರಾಘವೇಂದ್ರ ರಾವ್ ಮಾತನಾಡಿ ‘ ವೈದ್ಯಕೀಯ ವೃತ್ತಿ ಸಮಾಜದಲ್ಲಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ವೃತ್ತಿಯಾಗಿದೆ. ವಿದ್ಯಾರ್ಥಿಗಳು ತಮ್ಮ ರೋಗಿಗಳೊಂದಿಗೆ ಸಹಾನುಭೂತಿ ಮತ್ತು ನಂಬಿಕೆ ತುಂಬಿದ ಸಂಬಂಧ ಬೆಳೆಸಬೇಕು. ಜ್ಞಾನಾಭಿಲಾಷೆ ಎಂದಿಗೂ ಕಡಿಮೆಯಾಗಬಾರದು. ಹೆಚ್ಚು ಕಲಿಯುವ ಹಂಬಲವೇ ಯಶಸ್ಸಿನ ಬೀಗ ಎಂದದರು.
ಶ್ರೀನಿವಾಸ ವಿ.ವಿ.ಯ ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಮಾತನಾಡಿ ಈ ವರ್ಷ ವಿಶ್ವವಿದ್ಯಾಲಯ ಆಸ್ಪತ್ರೆಯಲ್ಲಿ ರೋಬೋಟಿಕ ಶಸ್ತ್ರಚಿಕಿತ್ಸಾ ಘಟಕ ಸ್ಥಾಪಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದ ನೇರ ಅನುಭವ ಪಡೆಯುವ ಅವಕಾಶ ದೊರೆಯಲಿದೆ ಎಂದರು.
ಶ್ರೀನಿವಾಸ ವಿ.ವಿ.ಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಎ. ವಿಜಯಲಕ್ಷ್ಮಿ.ಆರ್. ರಾವ್, ಪ್ರೊ.ಮಿತ್ರಾ.ಎಸ್.ರಾವ್ ಮುಖ್ಯ
ಅತಿಥಿಗಳಾಗಿದ್ದರು. ಕುಲಸಚಿವ ಡಾ. ಕೆ. ಸತ್ಯನಾರಾಯಣ ರೆಡ್ಡಿ ಅವರು ವಿಶ್ವವಿದ್ಯಾಲಯದ ಸೌಲಭ್ಯಗಳು, ಮೂಲಸೌಕರ್ಯ ಕುರಿತು ವಿವರಿಸಿದರು. ರಿಜಿಸ್ಟ್ರಾರ್‌ಗಳಾದ ಡಾ. ಅನಿಲ್ ಕುಮಾರ್, ಡಾ. ಅಜಯ್ ಕುಮಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಡೀನ್ ಡಾ. ಉದಯ ಕುಮಾರ್ ರಾವ್ ಸ್ವಾಗತಿಸಿ. ಶ್ರೀನಿವಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಡೇವಿಡ್.ಎಂ. ರೊಸಾರಿಯೊ ವಂದಿಸಿದರು. ಡಾ. ಆನೆಟ್ ಡಿಸೋಜಾ ಮತ್ತು ಡಾ. ಅನುಷಾ ಕಾರ್ಯಕ್ರಮ ನಿರೂಪಿಸಿದರು.