ಜಿಲ್ಲೆ

ಶ್ರೀಮೂರ್ತಿ ದೇವರ ವಾರ್ಷಿಕ ಮಹೋತ್ಸವ ನಾಳೆಯಿಂದ

ಎಂ.ರವಿ

ವಿರಾಜಪೇಟೆ: ಇತಿಹಾಸ ಪ್ರಸಿದ್ಧ ಬಾಳೂಗೋಡು ಶ್ರೀ ಮೂರ್ತಿ ದೇವರ ವಾರ್ಷಿಕ ತೆರೆ ಮಹೋತ್ಸವ ಮಾ.30ರಂದು ಪ್ರಾರಂಭವಾಗಿ ಏ.1 ರಂದು ಕೊನೆಯಾಗಲಿದೆ. ವಾರ್ಷಿಕ ತೆರೆ ಮಹೋತ್ಸವದ ಅಂಗವಾಗಿ ಮೂರು ದಿನಗಳು ದೇವತಾ ಕೈಂಕರ್ಯಗಳು ದೇಗುಲದಲ್ಲಿ ನಡೆಯಲಿವೆ. ಉತ್ಸವಾದಿ ಕಾರ್ಯಕ್ರಮದಲ್ಲಿ ನಾಡಿನ ಸಮಸ್ತ ಭಕ್ತ ಮಾಹಾಶಯರು ಭಾಗಿಗಳಾಗಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು ಮನವಿ ಮಾಡಿದ್ದಾರೆ.