ಮುದ್ದು ಶ್ರೀಕೃಷ್ಣ ಸ್ಪರ್ಧೆಯನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ಉದ್ಘಾಟಿಸಿದರು.  
ಜಿಲ್ಲೆ

ಶ್ರೀಕೃಷ್ಣ ಸ್ಪರ್ಧೆ ಮಕ್ಕಳ ಧಾರ್ಮಿಕ ಚಿಂತನೆಗೆ ಸಹಕಾರಿ

ಇಂದಿರಾ ಎನ್ ಕೆ

ಕೋಟ: ಶ್ರೀಕೃಷ್ಣ ಸ್ಪರ್ಧೆಗಳು ಮಕ್ಕಳಲ್ಲಿ ಧಾರ್ಮಿಕ ಚಿಂತನೆ ಬೆಳೆಯಲು ಸಹಕಾರಿ ಎಂದು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಚ್.ಕುಂದರ್ ಹೇಳಿದರು.

ಮಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಆಶ್ರಯದಲ್ಲಿ ಹಾಗೂ ಶ್ರೀ ರಾಮಪ್ರಸಾದ ಅಂಗವಾಡಿ ನೇತೃತ್ವದಲ್ಲಿ ಮಣೂರು ಮಹಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಮುದ್ದು ಶ್ರೀಕೃಷ್ಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ.ಮಯ್ಯ, ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಸ್.ಕುಂದರ್, ನಮೃತಾ ಪೈ, ಕೋಟ ಪಂಚವರ್ಣದ ಸದಸ್ಯ ದಿನೇಶ್ ಆಚಾರ್, ದೇಗುಲ ಟ್ರಸ್ಟಿ ದಿವ್ಯಾ ಪ್ರಭು ಉಪಸ್ಥಿತರಿದ್ದರು. ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ವಂದಿಸಿದರು.