ಗಣೇಶ ಚತುರ್ಥಿ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ, ಗಣೇಶ ಮೂರ್ತಿ ವಿಸರ್ಜಿಸುತ್ತಿರುವುದು. 
ಜಿಲ್ಲೆ

ಶ್ರೀಗೌರಿ, ಗಣೇಶ ಮೂರ್ತಿ ವಿಸರ್ಜನೆ

ರವಿಕುಮಾರ್ ಪಿ. ಕೆ

ಸುಂಟಿಕೊಪ್ಪ: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಶ್ರೀ ಅಯ್ಯಪ್ಪ ದೇವಾಲಯ ಸಮಿತಿ ವತಿಯಿಂದ ಗಣೇಶ ಚತುರ್ಥಿ ಪ್ರಯುಕ್ತ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ, ಗಣೇಶ ಮೂರ್ತಿಗೆ ವಿವಿಧ ಪೂಜಾ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು.

ಮಂಗಳವಾರ ಸಂಜೆ ಶ್ರೀಗೌರಿ, ಗಣೇಶ ಮೂರ್ತಿಯನ್ನು ಅಲಂಕರಿಸಿದ ಮಂಟಪದಲ್ಲಿ ಕೂರಿಸಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ದು ಚೋರನ ಹೊಳೆಯಲ್ಲಿ ದೇವರ ವಿಗ್ರಹ ಮೂರ್ತಿಯನ್ನು ವಿಸರ್ಜಿಸಲಾಯಿತು.

ಶ್ರೀ ಅಯ್ಯಪ್ಪ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎನ್.ಯೋಗೇಶ, ಗ್ರಾ.ಪಂ. ಸದಸ್ಯ ಎಸ್.ಎನ್.ಯತೀಶ್ ರೈ, ಅವಿಲಾಷ್, ಅಯ್ಯಪ್ಪ ಮೊದಲಾದವರು ಉಪಸ್ಥಿತರಿದ್ದರು.