ಅಳವಂಡಿ ಸಮೀಪದ ಕವಲೂರಿನಲ್ಲಿ ಶ್ರೀ ರಣದಾಂಬಿಕೆ ಜಾತ್ರೆ ಅಂಗವಾಗಿ ದೇವತೆಯರ ಮೆರವಣಿಗೆ ನಡೆಯಿತು. ಪ್ರಮುಖರಾದ ಪ್ರಮುಖರಾದ ಪೂಜಾರಪ್ಪ, ರಣದಪ್ಪ, ಭರಮಪ್ಪ, ನೀಲಪ್ಪ, ಅಣ್ಣಪ್ಪ, ದೇವಪ್ಪ, ಯಮನಪ್ಪ, ಮಹೇಶ, ಶಿವಪ್ಪ, ನಿಂಗಪ್ಪ, ರಣದಪ್ಪ, ಈರಪ್ಪ, ಪರಸಪ್ಪ, ಮುದಿಯಪ್ಪ, ಕೃಷ್ಣಪ್ಪ, ಚಿದಾನಂದಪ್ಪ, ಸಾರೆಪ್ಪ ಇದ್ದರು. 
ಜಿಲ್ಲೆ

ಶ್ರೀ ರಣದಾಂಬಿಕೆ ಮೆರವಣಿಗೆ ಅದ್ದೂರಿ

Kopala - Desk - Eraveni

ಅಳವಂಡಿ: ಸಮೀಪದ ಕವಲೂರಿನಲ್ಲಿ ಶ್ರೀ ರಣದಾಂಬಿಕೆ ಜಾತ್ರೆ ಅಂಗವಾಗಿ ದೇವತೆಯರ ಮೆರವಣಿಗೆ ಭಾನುವಾರ ಅದ್ದೂರಿಯಾಗಿ ಜರುಗಿತು.

ರಣದಾಂಬಿಕೆ ದೇವಿ, ಗಾಳೆಮ್ಮ, ಮಾಯಮ್ಮ, ಶ್ರೀ ಸಾರಿ ದುರ್ಗಮ್ಮ, ಶ್ರೀ ಚಂಗಳಿ ದುರ್ಗಮ್ಮದೇವಿಗೆ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಪೂಜೆ ಸಲ್ಲಿಸಿ ಉಡಿ ತುಂಬಿದರು.

ನಂತರ ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಐದೂ ದೇವತೆಯರ ಮೂರ್ತಿಯನ್ನಿರಿಸಿ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಬನ್ನಿ ಮಹಾಂಕಾಳಿಗೆ ಪೂಜೆ ಸಲ್ಲಿಸಿ ಹಳ್ಳಕ್ಕೆ ತೆರಳಿ ಗಂಗಾ ಪೂಜೆ ನೆರವೇರಿಸಲಾಯಿತು. ನಂತರ ದೇವಸ್ಥಾನ ತಲುಪಿತು.