ಜಿಲ್ಲೆ

ಶ್ರೀ ಸುಬ್ರಹ್ಮಣ್ಯ ಸ್ವಾಮೀಜಿ ಸೀಮೋಲ್ಲಂಘನ

ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ 28ನೇ ಚಾತುರ್ಮಾಸ್ಯ ವ್ರತವು ಬುಧವಾರ ಸಂಪನ್ನಗೊಂಡಿತು.

ಜು.27ರಂದು ಮಠದಲ್ಲಿ 28ನೇ ಚಾತುರ್ಮಾಸ್ಯ ವ್ರತವನ್ನು ಶ್ರೀಗಳು ಆರಂಭಿಸಿದ್ದರು. ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಮತ್ತು ವೈದಿಕ ವಿಧಿ-ವಿಧಾನಗಳು ನೆರವೇರಿದ್ದವು. ಸಾಂಸ್ಕೃತಿಕ ವೈಭವ, ಕಲೋತ್ಸವ, ಶ್ರೀಗಳಿಂದ ಆಶೀರ್ವಚನ, ಉಪನ್ಯಾಸ, ತಾಳಮದ್ದಳೆ, ಗಾಯನ, ಸಂಗೀತ, ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ, ಲಘು ಸಂಗೀತ, ಯಕ್ಷಗಾನ ನೆರವೇರಿತ್ತು. ವ್ರತವನ್ನು ಸಂಪೂರ್ಣಗೊಳಿಸಿ ಶ್ರೀಗಳು ಬುಧವಾರ ದರ್ಪಣ ತೀರ್ಥ ನದಿಗೆ ತೆರಳಿ ನದಿಯಲ್ಲಿ ಮೃತ್ತಿಕಾ ವಿಸರ್ಜನೆ ಮಾಡಿ ಸೀಮೋಲ್ಲಂಘನ ಮಾಡಿದರು.