ಜಿಲ್ಲೆ

ಅಲ್ಲಂಪುರದಲ್ಲಿ ಶ್ರೀ ಶನೈಶ್ಚರಸ್ವಾಮಿ ರಥೋತ್ಸವ

madikerimailmanju

ಚಿಕ್ಕಮಗಳೂರು: ತಾಲೂಕಿನ ಅಲ್ಲಂಪುರದ ಪ್ರಸಿದ್ಧ ಶ್ರೀ ಕ್ಷೇತ್ರ ಶನೈಶ್ಚರಸ್ವಾಮಿ ರಥೋತ್ಸವವು ನೂರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ 8ಗಂಟೆ ಸುಮಾರಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಶನೈಶ್ಚರಸ್ವಾಮಿಯವರನ್ನು ಕಲಶ ಮತ್ತು ಸವಾರಿ ನಡೆಮುಡಿ ಮೂಲಕ ಕರೆತಂದು ಕೆಂಡಾರ್ಚನೆ ನಡೆಸಲಾಯಿತು. ಮಧ್ಯಾಹ್ನ ಶ್ರೀಯವರ ಬ್ರಹ್ಮರಥೋತ್ಸವ ಸಂಪನ್ನಗೊಂಡಿತು. ಹೊಸಕೋಟೆ ರಾಮನಹಳ್ಳಿ ರಾಜಶೇಖರಯ್ಯ ಕೆಂಡೋತ್ಸವ ಪೂಜೆಯ ನೇತೃತ್ವ ವಹಿಸಿದ್ದರು.

ದೇವಾಲಯ ಸಮಿತಿ ಅಧ್ಯಕ್ಷ ಲೋಕೇಶ್ ಮಾತನಾಡಿ ಶ್ರೀಸ್ವಾಮಿಗೆ ಹಣ್ಣು ಮತ್ತು ತೆಂಗಿನ ಕಾಯಿ ಒಡೆಯುವ ಮೂಲಕ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು. ವೇದಬ್ರಹ್ಮ ಅವಧೂತ ಅಶೋಕ ಗಣಪತಿ ಶರ್ಮ ಗುರೂಜಿ, ಗೌರವ ಅಧ್ಯಕ್ಷ ಬಿ.ಎಸ್.ಬಸಪ್ಪಶೆಟ್ಟಿ, ಉಪಾಧ್ಯಕ್ಷ ಯು.ಪಿ.ನಾಗರಾಜ್, ಕಾರ್ಯದರ್ಶಿ ಮೋಹನ್‍ಕುಮಾರ್, ಖಜಾಂಚಿ ತಿಮ್ಮಯ್ಯ, ಸಂಚಾಲಕ ಪರಮೇಶ್, ಅಮರನಾಥ್, ಬಸವರಾಜ್, ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.