ಬಂಟ್ವಾಳ: ನಮ್ಮತನವನ್ನು ಬೆಳೆಸಿಕೊಳ್ಳುವುದರೊಂದಿಗೆ ಧಾರ್ಮಿಕ ಆಚರಣೆಗಳ ಮೂಲಕ ಸಮಾಜವನ್ನು ಒಗ್ಗೂಡಿಸುವ ಅವಶ್ಯಕತೆ ಇದೆ ಎಂದು ಬಂಟ್ವಾಳ ನಿವೃತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿ ಆರ್.ಕಂಬಳಿ ಹೇಳಿದರು.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಳಿ ಕಲ್ಲಡ್ಕ ವತಿಯಿಂದ ಶನಿವಾರ ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದ ಸನ್ಮತಿ ಭವನದಲ್ಲಿ ಜರುಗಿದ 5ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮಹಿಳಾ ಮಂಡಳಿಯ ಅಧ್ಯಕ್ಷೆ ಮೀನಾಕ್ಷಿ ಆರ್.ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ಗೌರವ ಅಧಕ್ಷೆ ಡಾ.ಕಮಲ ಪ್ರಭಾಕರ ಭಟ್, ಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಪ್ರಭು, ಬಾಳ್ತಿಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಹಿರಣ್ಮಯಿ ಉಪಸ್ಥಿತರಿದ್ದರು.
ಬಾಲಕೃಷ್ಣ ಭಟ್ ಪೌರೋಹಿತ್ಯದಲ್ಲಿ ಶ್ರೀ ಶನೈಶ್ಚರ ಪೂಜೆ ಜರುಗಿತು. ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದ ಅಧ್ಯಕ್ಷ ಈಶ್ವರ ಭಟ್ ರಾಕೋಡಿ, ಶ್ರೀ ಶಾರದಾ ಪ್ರತಿಷ್ಠಾನ ಕಲ್ಲಡ್ಕದ ಅಧ್ಯಕ್ಷ ಯತಿನ್ ಕುಮಾರ್, ಕಾರ್ಯದರ್ಶಿ ವಜ್ರನಾಥ್ ಕಲ್ಲಡ್ಕ, ಶ್ರೀ ಶಾರದಾ ಪೂಜಾ ಸಮಿತಿಯ ಅಧ್ಯಕ್ಷ ಯೋಗೀಶ್ ಪೂಜಾರಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಲೋಕನಾಥ್ ಏಳ್ತೀಮಾರ್, ಜಯರಾಮ ರೈ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ಯಮುನಾ ಸ್ವಾಗತಿಸಿ, ವಿದ್ಯಾ ಗುಣಾಕರ ವಂದಿಸಿದರು. ಲಖಿತಾ ಆರ್.ಶೆಟ್ಟಿ ಹಾಗೂ ರೇಣುಕಾ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.