ಜಿಲ್ಲೆ

ದಾವಣಗೆರೆಯಲ್ಲಿ ಚಾತುರಮಾಸ್ಯ ವ್ರತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ದೈವಜ್ಞ ಬ್ರಾಹ್ಮಣ ಸಮಾಜದ ಪ್ರಥಮ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತಿ ಸ್ವಾಮೀಜಿ ಹಾಗೂ ಅವರ ತತ್ ಕರಕಮಲ ಸಂಜಾತರಾದ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿ ಜು. 10ರಿಂದ ಸೆಪ್ಟೆಂಬರ್ 7ರವರೆಗೆ ದಾವಣಗೆರೆಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಚಾತುರ್ವಸ್ಯ ವ್ರತ ಕೈಗೊಳ್ಳುವರು.

ಶ್ರೀಗಳು ಚಾತುರ್ವಸ್ಯ ವ್ರತಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಕೇರಳ ಭಾಗದಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು.  ಜುಲೈ 30ರಂದು ಹುಬ್ಬಳ್ಳಿಯ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ನಿರ್ಣಯಿಸಲಾಗಿದೆ ಎಂದು ಹುಬ್ಬಳ್ಳಿಯ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ವಿಜಯ ವೆರ್ಣೆಕರ ತಿಳಿಸಿದ್ದಾರೆ.

ಈ ಕುರಿತು ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಡಾ ವೆಂಕಟೇಶ ರಾಯ್ಕರ್, ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಮಾರುತಿ ವೆರ್ಣೆಕರ, ವಿನೊದ ರೇವಣಕರ್, ಉದಯ ರೇವಣಕರ್, ರಾಜನ್ ಅಣ್ವೇಕರ, ಸತೀಶ ಶೇಜವಾಡಕರ, ಗುರುನಾಥ ವೆರ್ಣೆಕರ, ಪ್ರದೀಪ ರಾಯ್ಕರ್, ರಾಜೇಶ ಗಾಂವಕರ, ಮಹಿಳಾ ಮಂಡಳದ ಅಧ್ಯಕ್ಷೆ ಪ್ರೇಮಾ ಭಟ್, ರಶ್ಮಿ ಅಣ್ವೇಕರ್, ಯುವಕ ಸಂಘದ ಅಧ್ಯಕ್ಷ ಉದಯ ವೆರ್ಣೆಕರ್, ಸಂಜು ಪುತಲೆಕರ್, ವಿವೇಕ ಅಣ್ವೇಕರ್, ಮಾರುತಿ ರೇವಣಕರ್, ಸದಸ್ಯರು ಹಾಜರಿದ್ದರು.