ಬೆಂಡೆಕಟ್ಟೆ ಗ್ರಾಮದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.  
ಜಿಲ್ಲೆ

ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಸಂಪನ್ನ

Shivamogga - Desk - Vinayakumar D B

ಶಿಕಾರಿಪುರ: ತಾಲೂಕಿನ ಬೆಂಡೆಕಟ್ಟೆ ಗ್ರಾಮದಲ್ಲಿ ಶ್ರೀ ವೀರಶೈವ ಜಂಗಮ ಸಮಾಜದಿಂದ ಶುಕ್ರವಾರ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಗದ್ಗುರುಗಳ ಭಾವಚಿತ್ರದ ಅದ್ದೂರಿ ಮೆರವಣಿಗೆ ನೆರವೇರಿತು. ಡೊಳ್ಳು ಕುಣಿತ, ಭಜನೆ, ವೀರಗಾಸೆ, ಮಂಗಳ ವಾದ್ಯ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರಗು ತುಂಬಿತು.
ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಕೆ.ಎಚ್.ಪುಟ್ಟಸ್ವಾಮಿ, ಬೆಂಡೆಕಟ್ಟೆ ಸಮಾಜದ ಅಧ್ಯಕ್ಷ ಪಂಚಾಕ್ಷರಯ್ಯ, ಶಿವಮೂರ್ತಯ್ಯ, ಶಿವಕುಮಾರ್, ನಾಗರಾಜಯ್ಯ, ಬಸವರಾಜಯ್ಯ, ಬೋಜರಾಜ್ ಪಾಟೀಲ್, ಕುಮಾರಸ್ವಾಮಿ ಹಿರೇಮಠ, ಎಸ್.ಎಸ್.ಚನ್ನಬಸಯ್ಯ, ಬಿ.ಎಂ.ಚನ್ನವೀರಯ್ಯ, ವೀರೇಶ್, ಶಿವಯ್ಯ, ಭೀಮಣ್ಣ ಇತರರಿದ್ದರು.