ಬಾಗೂರು: ಹೋಬಳಿಯ ಇತಿಹಾಸ ಪ್ರಸಿದ್ಧ ಅಮರಗಿರಿ ಚಿಕ್ಕೋನಹಳ್ಳಿ ಶ್ರೀ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಭ್ರಮದಿಂದ ಜರುಗಿತು.
ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ದೇವಾಲಯವನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತರು ಬಿಸಿಲನ್ನು ಲೆಕ್ಕಿಸದೆ ರಥವನ್ನು ಎಳೆದರು.
ಪ್ರಮುಖರಾದ ಶ್ರೀಧರ್ ಸ್ವಾಮೀಜಿ, ರೂಪಾ ಸುರೇಶ್, ರವೀಶ್, ವೆಂಕಟೇಶ್, ಸುಕನ್ಯಾ, ಸೋಮಶೇಖರ್, ಜಯಣ್ಣ, ಶಿವೇಗೌಡ, ಪ್ರಧಾನ ಅರ್ಚಕ ಶ್ರೀಕಾಂತ್, ಕಿರಣ್ ಕುಮಾರ್, ಪಾರ್ಥಸಾರಥಿ, ಸಂಪತ್ ಕುಮಾರ್, ಸನತ್ ಕುಮಾರ್, ರಂಗನಾಥ್, ವಿಜಯಕುಮಾರ್ ಇತರರು ಪಾಲ್ಗೊಂಡಿದ್ದರು.