ಹೆಬ್ರಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಗೋಶಾಲೆ ಟ್ರಸ್ಟಿ ವಿದ್ವಾನ್ ಪದ್ಮನಾಭ ಆಚಾರ್ಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.  
ಜಿಲ್ಲೆ

ಗಿಲ್ಲಾಳಿ ಗೋಶಾಲೆಯಲ್ಲಿ ಶ್ರೀ ರಾಮ ನಾಮಸ್ಮರಣೆ

ಇಂದಿರಾ ಎನ್ ಕೆ

ಹೆಬ್ರಿ: ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ರಾಮದೇವರ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವದ ಅಂಗವಾಗಿ ಹೆಬ್ರಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ಗೋಶಾಲೆ ಟ್ರಸ್ಟಿಗಳಾದ ವಿದ್ವಾನ್ ಪದ್ಮನಾಭ ಆಚಾರ್ಯ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ಸೂರಿಮಣ್ಣು ಸದಾಶಿವ ಉಪಾಧ್ಯಾಯ ಮತ್ತು ಬಳಗದವರಿಂದ ಭಜನೆ, ಸಾರ್ವಜನಿಕರಿಂದ ಶ್ರೀ ರಾಮ ನಾಮ ಜಪಯಜ್ಞ, ನೂರೆಂಟು ದೀಪ ಬೆಳಗಿಸಿ ಮಹಾಪೂಜೆ ನಡೆಸಲಾಯಿತು. ಗೋಶಾಲೆ ಟ್ರಸ್ಟಿಗಳಾದ ವಿಷ್ಣುಮೂರ್ತಿ ಆಚಾರ್ಯ, ವಿಷ್ಣುಮೂರ್ತಿ ನಾಯಕ್, ಡಾ.ರಾಮಚಂದ್ರ ಐತಾಳ್, ಶ್ರೀಪತಿ ಭಟ್ ದೂಪದಕಟ್ಟೆ, ವೆಂಕಟರಮಣ ಕಲ್ಕೂರ್ ಉಪ್ಪಳ, ಬಲ್ಲಾಡಿ ಚಂದ್ರಶೇಖರ ಭಟ್, ಗಿಲ್ಲಾಳಿ ಪರಿಸರದ ಭಕ್ತರು ಉಪಸ್ಥಿತರಿದ್ದರು.